ಅಕ್ರಮ ಆಸ್ತಿ ಗಳಿಕೆ ಕೇಸ್‌: ಶಾಸಕ ಜಮೀರ್‌ಗೆ ಎಸಿಬಿಯಿಂದ ಬುಲಾವ್

ಅಕ್ರಮ ಆಸ್ತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಾಮರಾಜಪೇಟೆಶಾಸಕ ಜಮೀರ್‌ ಅಹಮದ್‌ ಖಾನ್‌ ಗೆ ಎಸಿಬಿ ನೋಟಿಸ್‌ ಜಾರಿಗೊಳಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17): ಅಕ್ರಮ ಆಸ್ತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಾಮರಾಜಪೇಟೆಶಾಸಕ ಜಮೀರ್‌ ಅಹಮದ್‌ ಖಾನ್‌ ಗೆ ಎಸಿಬಿ ನೋಟಿಸ್‌ ಜಾರಿಗೊಳಿಸಿದೆ. 

PSI ಪರೀಕ್ಷಾ ಅಕ್ರಮ: ಅಭ್ಯರ್ಥಿಗಳ ಲಿಂಕ್‌ನಲ್ಲಿರುವ ಹಾಲಿ ಅಧಿಕಾರಿಗಳಿಗೆ ಕಂಟಕ

ಈ ನೋಟಿಸ್‌ ತಲುಪಿದ 10 ದಿನಗಳೊಳಗೆ ತನಿಖಾಧಿಕಾರಿ ಮುಂದೆ ತಮ್ಮ ಮೇಲಿನ ಆರೋಪಗಳಿಗೆ ಪೂರಕವಾದ ದಾಖಲೆ ಸಮೇತ ಹಾಜರಾಗಿ ಹೇಳಿಕೆ ದಾಖಲಿಸಬೇಕು ಎಂದು ಜಮೀರ್‌ ಅವರಿಗೆ ಎಸಿಬಿ ಸೂಚಿಸಿದೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಎಸಿಬಿ ಮುಂದೆ ಜಮೀರ್‌ ಹಾಜರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇ.ಡಿ ವರದಿ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಎಸಿಬಿ, ಜು.6 ರಂದು ಜಮೀರ್‌ ಅವರ ಮನೆ, ನ್ಯಾಷನಲ್‌ ಟ್ರಾವೆಲ್ಸ್‌ ಕಚೇರಿ ಹಾಗೂ ಅತಿಥಿ ಗೃಹ ಸೇರಿ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿತ್ತು

Related Video