ಅಂಬಿ ಪಾರ್ಥೀವ ಶರೀರ ಮಂಡ್ಯಕ್ಕೆ ಕೊಂಡೊಯ್ಯುವ ಬಗ್ಗೆ ಎಚ್‌ಡಿಕೆ- ಅಭಿಷೇಕ್ ನಡುವೆ ನಡೆದಿದ್ದೇನು.?
ಸುಮಲತಾ- ಎಚ್‌ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಆರ್‌ಎಸ್ ಬಿರುಕು ವಿಚಾರದಿಂದ ಶುರುವಾಗಿ ಮೈಷುಗರ್ ಕಾರ್ಖಾನೆ, ಈಗ ಅಂಬಿ ಸ್ಮಾರಕ ವಿಚಾರದವರೆಗೆ ಬಂದು ನಿಂತಿದೆ.
ಬೆಂಗಳೂರು (ಜು. 09): ಸುಮಲತಾ- ಎಚ್‌ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಆರ್‌ಎಸ್ ಬಿರುಕು ವಿಚಾರದಿಂದ ಶುರುವಾಗಿ ಮೈಷುಗರ್ ಕಾರ್ಖಾನೆ, ಈಗ ಅಂಬಿ ಸ್ಮಾರಕ ವಿಚಾರದವರೆಗೆ ಬಂದು ನಿಂತಿದೆ.
'ಅಂಬಿ ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೊಡೋಕೆ ಹೋದ್ರೆ ಮುಖಕ್ಕೆ ಬಿಸಾಡಿದ್ರು ಎಚ್‌ಡಿಕೆ'
'ಅಂಬರೀಶ್ ವಿಚಾರವನ್ನು ಪದೇ ಪದೇ ಯಾಕಾಗಿ ಬಳಸುತ್ತಿದ್ದಾರೋ ಗೊತ್ತಿಲ್ಲ. ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರುವ ವಿಚಾರದಲ್ಲಿಯೂ ರಾಜಕೀಯ ಮಾಡಿದ್ದರು' ಎಂದು ಅಭಿಷೇಕ್ ಹೇಳಿದ್ದರು. ಇನ್ನು ಗಣಿ ಪ್ರದೇಶಗಳಿಗೆ ಸುಮಲತಾ ಭೇಟಿ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸಂಸದರಾಗಿ ಅವರ ಕೆಲಸ ಮಾಡಿದ್ಧಾರೆ. ಟೀಕೆಗಳಿಗೆ ಉತ್ತರಿಸಲ್ಲ' ಎಂದಿದ್ದಾರೆ.