ಶಿವಮೊಗ್ಗದಲ್ಲಿ ಅಮಾನವೀಯ ಘಟನೆ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ

ನಮ್ಮ ಮನೆಯ ಮುಂಭಾಗ ಕಸವನ್ನು ಹಾಕಬೇಡಿ ಎಂದಿದ್ದಕ್ಕೆ ಮಹಿಳೆಯೊಬ್ಬರು 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Share this Video
  • FB
  • Linkdin
  • Whatsapp

ಶಿವಮೊಗ್ಗ (ಜು.01): ನಮ್ಮ ಮನೆಯ ಮುಂಭಾಗ ಕಸವನ್ನು ಹಾಕಬೇಡಿ ಎಂದಿದ್ದಕ್ಕೆ ಮಹಿಳೆಯೊಬ್ಬರು 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಚ್ಚಮ್ಮ ಹಲ್ಲೆಗೊಳಗಾದ ವೃದ್ಧೆ. ಕಳೆದ ಜೂ.24ರಂದು ಈ ಘಟನೆ ನಡೆದಿದೆ. ಹುಚ್ಚಮ್ಮ ಅವರು ಮನೆಯ ಪಕ್ಕದ ಪ್ರೇಮ ಎಂಬುವರಿಗೆ ನಮ್ಮ ಮನೆಯ ಮುಂಭಾಗ ಕಸವನ್ನು ಹಾಕಬೇಡಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರೇಮ, ವೃದ್ಧೆಯನ್ನು ಮನೆಯಿಂದ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಹುಚ್ಚಮ್ಮನ ಪುತ್ರ ಕನ್ನಪ್ಪ ಈ ವಿಚಾರವನ್ನು ಗ್ರಾಮದ ಹಿರಿಯರಿಗೆ ಮುಟ್ಟಿಸಿದ್ದಾರೆ. ಆದರೆ, ಹಿರಿಯರು ಇದನ್ನು ನಿರ್ಲಕ್ಷಿಸಿದ್ದಾರೆ. ಕನ್ನಪ್ಪ ತಾಯಿಯೊಂದಿಗೆ ಆನಂದಪುರ ಪೊಲೀಸ್ ಠಾಣೆಗೆ ತೆರಳಿ ಹಲ್ಲೆ ಮಾಡಿದ ಪ್ರೇಮ, ಆಕೆಯ ಪತಿ ಮಂಜುನಾಥ್‌, ಪುತ್ರ ದರ್ಶನ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪ್ರೇಮವನ್ನು ಬಂಧಿಸಿದ್ದ ಪೊಲೀಸರು ಬಳಿಕ ಠಾಣಾ ಜಾಮೀನು ನೀಡಿ ಮನೆಗೆ ಕಳುಹಿಸಿದ್ದರು. ಈ ವಿಚಾರ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಆನಂದಪುರ ಪೊಲೀಸರು ಮತ್ತೆ ಪ್ರೇಮಾರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Related Video