ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್: 18 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಸಿಗದೇ ವ್ಯಕ್ತಿ ಸಾವು
ಕೊರೊನಾ ಬರದಂತೆ ಎಚ್ಚರ ವಹಿಸಿದರೆ ಬಚಾವಾಗ್ತೀರಿ..! ಕೊರೊನಾ ಬಂದ್ರೆ ಚಿಕಿತ್ಸೆಯೂ ಸಿಗಲ್ಲ, ಆಸ್ಪತ್ರೆಗಳು ಸೇರಿಸಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಯಾವ ರೀತಿ ಕೇರ್‌ಲೆಸ್ ವರ್ತನೆ ಇದೆ ಎಂಬುದನ್ನು ಸುವರ್ಣನ್ಯೂಸ್ ಅನಾವರಣಗೊಳಿಸುತ್ತಿದೆ. ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರೂ ವೈದ್ಯರ ಮನಸ್ಸು ಕರಗಲಿಲ್ಲ. ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿದ್ದರೂ ಗಮನಿಸುತ್ತಿಲ್ಲ.
ಬೆಂಗಳೂರು (ಜೂ. 30): ಕೊರೊನಾ ಬರದಂತೆ ಎಚ್ಚರ ವಹಿಸಿದರೆ ಬಚಾವಾಗ್ತೀರಿ..! ಕೊರೊನಾ ಬಂದ್ರೆ ಚಿಕಿತ್ಸೆಯೂ ಸಿಗಲ್ಲ, ಆಸ್ಪತ್ರೆಗಳು ಸೇರಿಸಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಯಾವ ರೀತಿ ಕೇರ್‌ಲೆಸ್ ವರ್ತನೆ ಇದೆ ಎಂಬುದನ್ನು ಸುವರ್ಣನ್ಯೂಸ್ ಅನಾವರಣಗೊಳಿಸುತ್ತಿದೆ. ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರೂ ವೈದ್ಯರ ಮನಸ್ಸು ಕರಗಲಿಲ್ಲ.
ಕೊರೊನಾದಿಂದ ಸಾವನ್ನಪ್ಪಿದ್ರೆ ಎಂಥಾ ಪರಿಸ್ಥಿತಿ ಬರುತ್ತೆ ನೋಡಿ..!
ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿದ್ದರೂ ಗಮನಿಸುತ್ತಿಲ್ಲ. 18 ಆಸ್ಪತ್ರೆ ಸುತ್ತಿದರೂ 52 ವರ್ಷದ ವ್ಯಕ್ತಿಗೆ ಚಿಕಿತ್ಸೆಯೇ ಸಿಗಲಿಲ್ಲ. ಜ್ವರ, ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಸಿಗದೇ ಕೊನೆಯುಸಿರೆಳೆದಿದ್ದಾರೆ. 36 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿ ಜೀವ ಬಿಟ್ಟಿದ್ದಾರೆ. ನಗರ್ತಪೇಟೆಯ ಗಾರ್ಮೆಂಟ್ಸ್ ಮಾಲಿಕನ ಕುಟುಂಬ ಬಿಚ್ಚಿಟ್ಟ ಸ್ಫೋಟಕ ಸತ್ಯವಿದು..! ಇದು ಇವರೊಬ್ಬರ ಕಥೆಯಲ್ಲ. ಗೊಟ್ಟಿಗೆರೆಯ ವ್ಯಕ್ತಿಯೊಬ್ಬರು 7 ಆಸ್ಪತ್ರೆ ಸುತ್ತಾಡಿ ಕೊನೆಗೆ 8 ನೇ ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಇದು ಹತ್ತಾರು ಜನರ ನೋವಿನ ಕಥೆಯಾಗಿದೆ.