Asianet Suvarna News Asianet Suvarna News

ಕೊರೋನಾ ಮರಣ ಮೃದಂಗ: ರಾಜ್ಯದಲ್ಲಿ ಕೇವಲ 4 ತಾಸಲ್ಲಿ ನಾಲ್ಕು ಮಂದಿ ಬಲಿ

Jun 28, 2020, 12:55 PM IST

ಬೆಂಗಳೂರು(ಜೂ.28): ರಾಜ್ಯದಲ್ಲಿ ಕಿಲ್ಲರ್‌ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ಗಂಟೆ ಗಂಟೆಗೆ ಸಾವು ಸಂಭವಿಸುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಕ್ಷಣ ಕ್ಷಣಕ್ಕೂ ಆತಂಕ ಎದುರಾಗುತ್ತಿದೆ.  ಕೇವಲ ನಾಲ್ಕು ಗಂಟೆಯಲ್ಲಿ ನಾಲ್ಕು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 

ಟೆಸ್ಟ್‌ ಮಾಡಿಸಿ ಟೀ ಕುಡಿದು ಬರೋದ್ರೊಳಗೆ ಕೋವಿಡ್ 19 ರಿಪೋರ್ಟ್ ನಿಮ್ಮ ಮುಂದೆ..!

ಹೌದು, ಮಂಗಳೂರಲ್ಲಿ ಎರಡು, ಹಾಸನ, ತುಮಕೂರಿನಲ್ಲಿ ತಲಾ ಒಂದು ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಬಲಿಯಾದವರ ಸಂಖ್ಯೆ 195ಕ್ಕೇರಿಕೆಯಾಗಿದೆ. ತುಮಕೂರಿನ 56 ವರ್ಷದ ವ್ಯಕ್ತಿ, ಮಂಗಳೂರಿನಲ್ಲಿ 31 ವರ್ಷದ ಯುವಕ ಹಾಗೂ ಹಾಸನದಲ್ಲಿ 65 ವರ್ಷದ ವೃದ್ಧೆ ಕೊರೋನಾಗೆ ಬಲಿಯಾಗಿದ್ದಾರೆ.