Boom in Bengaluru: ಬೆಂಗಳೂರಿನಲ್ಲಿ 2.6 ರಷ್ಟು ತೀವ್ರತೆಯ ಭೂಕಂಪವಾಗಿದೆ: ಭೂ ವಿಜ್ಞಾನಿ
ಬೆಂಗಳೂರಿನಲ್ಲಿ (Bengaluru) ಭೂಕಂಪ (Earthquake) ಆಗಿದ್ದು ನಿಜ. ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದೆ ಎಂದು ಸುವರ್ಣ ನ್ಯೂಸ್‌ಗೆ ಭೂ ವಿಜ್ಞಾನಿ ಎಸ್‌ಎಸ್‌ಎಂ ಪ್ರಕಾಶ್ ಹೇಳಿದ್ದಾರೆ.
ಬೆಂಗಳೂರು (ನ. 26): ನಗರದ ಹಲವೆಡೆ ಭೂ ಕಂಪನದ (Earthquake) ಅನುಭವವಾಗಿದೆ. ಕಗ್ಗಲಿಪುರ, ಆರ್‌ಆರ್ ನಗರ, ಕೆಂಗೇರಿ, ಹೆಮ್ಮಿಗೆಪುರ ಸೇರಿ ಹಲವೆಡೆ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 12.15 ಕ್ಕೆ ಭೂಮಿ ನಡುಗಿದ ಅನುಭವವಾಗಿದೆ. ಸ್ಫೋಟದ ಸದ್ದಿನೊಂದಿಗೆ (Loud Boom) ಭೂ ಕಂಪನದ ಅನುಭವಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
Boom in Bengaluru:ಬೆಂಗಳೂರಿನ ಹಲವೆಡೆ ಭಾರೀ ಶಬ್ಧ, ಭೂಕಂಪದ ಅನುಭವ, ಬೆಚ್ಚಿಬಿದ್ದ ಜನ
ಬೆಂಗಳೂರಿನಲ್ಲಿ ಭೂಕಂಪ ಆಗಿದ್ದು ನಿಜ. ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದೆ ಎಂದು ಸುವರ್ಣ ನ್ಯೂಸ್‌ಗೆ ಭೂ ವಿಜ್ಞಾನಿ ಎಸ್‌ಎಸ್‌ಎಂ ಪ್ರಕಾಶ್ ಹೇಳಿದ್ದಾರೆ. ರಾಜರಾಜೇಶ್ವರಿ ನಗರದ ಸುತ್ತ ಭೂಕಂಪ ಆಗಿದ್ದು ನಿಜ. ಆರ್‌ಆರ್ ನಿಮಿಷಾಂಬ ದೇಗುಲ ಭೂಕಂಪನದ ಕೇಂದ್ರಬಿಂದು. ಸುಮಾರು 10 ಕಿಮೀ ಆಳದಿಂದ ಭೂಕಂಪವಾಗಿದೆ ಎಂದಿದ್ದಾರೆ.