ಅಪ್ಪು ಫ್ಯಾನ್ಸ್‌ಗೆ ಇಂದು ರಾಜ್ ಕುಟುಂಬದಿಂದ ಅನ್ನ ಸಂತರ್ಪಣೆ, ವೆಜ್, ನಾನ್‌ವೆಜ್ ಊಟದ ವ್ಯವಸ್ಥೆ

ನಟ ಪುನೀತ್‌ ರಾಜ್‌ಕುಮಾರ್‌ ಪುಣ್ಯ ಸ್ಮರಣೆ ಪ್ರಯುಕ್ತ ಇಂದು ಅರಮನೆ ಮೈದಾನದಲ್ಲಿ  ಅನ್ನಸಂತರ್ಪಣೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ. 09): ನಟ ಪುನೀತ್‌ ರಾಜ್‌ಕುಮಾರ್‌ ಪುಣ್ಯ ಸ್ಮರಣೆ ಪ್ರಯುಕ್ತ ಇಂದು ಅರಮನೆ ಮೈದಾನದಲ್ಲಿ (Palace Ground) ಅನ್ನಸಂತರ್ಪಣೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಸುಮಾರು 25 ಸಾವಿರ ಮಂದಿ ಬರುವ ನಿರೀಕ್ಷೆ ಇದ್ದು, 1500 ಮಂದಿ ಬಾಣಸಿಗರು ಅಡುಗೆ ತಯಾರಿಸುತ್ತಿದ್ದಾರೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಊಟದ ವ್ಯವಸ್ಥೆ ಇರುತ್ತದೆ. ಏಕಕಾಲದಲ್ಲಿ 3 ಸಾವಿರ ಮಂದಿ ಕೂರಲು ವ್ಯವಸ್ಥೆ ಮಾಡಲಾಗಿದ್ದು, ಬಾಳೆಎಲೆ ಊಟ ಇರುತ್ತದೆ. ಕಾರ್ಯಕ್ರಮದ ಭದ್ರತೆಗೆ ಸುಮಾರು ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 

Add Asianetnews Kannada as a Preferred SourcegooglePreferred

Puneeth Rajkumar ಗೆ ಪವರ್‌ ಸ್ಟಾರ್ ಕೊಟ್ಟರು, ಈಗ ಅಮರಶ್ರೀ ಕೊಟ್ಟರು, ಶಿವಣ್ಣ

ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆಗೆ ಬೆಂಗಳೂರು ಸಂಚಾರ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಪೈಕಿ ಬಸ್‌, ಕಾರು ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗ ನಿಗದಿಗೊಳಿಸಿದ್ದಾರೆ. ಸಾರ್ವಜನಿಕರ ವಾಹನಗಳಿಗೆ ಕೃಷ್ಣವಿಹಾರ ಸಭಾಂಗಣದ ಆವರಣ ಹಾಗೂ ಗಣ್ಯರ ವಾಹನಗಳಿಗೆ ಗಾಯಿತ್ರಿ ವಿಹಾರ ಸಭಾಂಗಣದ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

Related Video