Asianet Suvarna News Asianet Suvarna News

Ultimate Kho Kho 2022 ರಾಜಸ್ಥಾನ ಎದುರು ರೋಚಕ ಗೆಲುವು ದಾಖಲಿಸಿದ ಗುಜರಾತ್ ಜೈಂಟ್ಸ್‌

ರಾಜಸ್ಥಾನ ವಾರಿಯರ್ಸ್ ಎದುರು 2 ಅಂಕಗಳ ರೋಚಕ ಜಯ ಸಾಧಿಸಿದ ಗುಜರಾತ್ ಜೈಂಟ್ಸ್‌
ರಾಜಸ್ಥಾನ ವಾರಿಯರ್ಸ್‌ನ ಅಕ್ಷಯ್ ಗಣಪುಲೆ ಅವರ ಹೋರಾಟ ವ್ಯರ್ಥ
ಕೊನೆಯ ನಿಮಿಷದಲ್ಲಿ ಸೋಲೊಪ್ಪಿಕೊಂಡ ರಾಜಸ್ಥಾನ ವಾರಿಯರ್ಸ್‌
ಕೊನೆಯ 7 ಸೆಕೆಂಟ್‌ಗಳಿದ್ದಾಗ ಅಕ್ಷಯ್ ಗಣಪುಲೆ ಔಟ್

First Published Aug 29, 2022, 4:49 PM IST | Last Updated Aug 29, 2022, 4:49 PM IST

ಪುಣೆ(ಆ.29): ಕೊನೆಯ ಕ್ಷಣದಲ್ಲಿ ಮಿಂಚಿನ ಪ್ರದರ್ಶನ ತೋರಿದ ಗುಜರಾತ್ ಜೈಂಟ್ಸ್‌ ತಂಡವು, ರಾಜಸ್ಥಾನ ವಾರಿಯರ್ಸ್ ಎದುರು ರೋಚಕ ಗೆಲುವು ಸಾಧಿಸಿದೆ. ಈಗಾಗಲೇ ಪ್ಲೇ ಆಫ್‌ ಹಾದಿ ಸುಗಮ ಮಾಡಿಕೊಂಡಿರುವ ಗುಜರಾತ್ ಜೈಂಟ್ಸ್‌ ತಂಡವು ರಾಜಸ್ಥಾನ ವಾರಿಯರ್ಸ್‌ ಎದುರು 42-40 ಅಂಕಗಳ ಗೆಲುವು ಸಾಧಿಸಿದೆ.

ರಾಜಸ್ಥಾನ ವಾರಿಯರ್ಸ್ ಒರ ಅಕ್ಷಯ್ ಗಣಪುಲೆ ಆಕರ್ಷಕ ಪ್ರದರ್ಶನ ನೀಡಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ. ಪಂದ್ಯ ಮುಕ್ತಾಯಕ್ಕೆ ಕೊನೆಯ 7 ಸೆಕೆಂಡ್‌ಗಳು ಭಾಕಿ ಇದ್ದಾಗ ಅಕ್ಷಯ್ ಔಟ್‌ ಆಗುತ್ತಿದ್ದಂತೆಯೇ ಗುಜರಾತ್ ಜೈಂಟ್ಸ್‌ ಗೆಲುವಿನ ಕೇಕೆ ಹಾಕಿತು. ಈ ಪಂದ್ಯದ ಹೈಲೈಟ್ಸ್‌ ಹೀಗಿತ್ತು ನೋಡಿ.
 

Video Top Stories