ಮುಗಿಯಿತಾ ಶಿಖರ್ ಧವನ್ ಟೀಂ ಇಂಡಿಯಾ ಜರ್ನಿ..?

ಯಾಕೋ ಟೀಂ ಇಂಡಿಯಾ ಎಡಗೈ ಬ್ಯಾಟ್ಸ್ ಮನ್ ಗಳ ಟೈಂ ಸರಿಯಿಲ್ಲ ಅಂತ ಕಾಣುತ್ತೆ. ಸತತ ನೀರಸ ಪ್ರದರ್ಶನದ ಮೂಲಕ ರಿಷಭ್ ಪಂತ್ ನಾಯಕ ವಿರಾಟ್ ಕೊಹ್ಲಿಯ ಕೋಪಕ್ಕೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಶಿಖರ್ ಧವನ್ ಅದೇ ಹಾದಿ ಹಿಡಿಯುತ್ತಿದ್ದಾರಾ ಎನ್ನುವ ಮಾತುಗಳು ದಟ್ಟವಾಗತೊಡಗಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು[ಸೆ.27]: ಯಾಕೋ ಟೀಂ ಇಂಡಿಯಾ ಎಡಗೈ ಬ್ಯಾಟ್ಸ್ ಮನ್ ಗಳ ಟೈಂ ಸರಿಯಿಲ್ಲ ಅಂತ ಕಾಣುತ್ತೆ. ಸತತ ನೀರಸ ಪ್ರದರ್ಶನದ ಮೂಲಕ ರಿಷಭ್ ಪಂತ್ ನಾಯಕ ವಿರಾಟ್ ಕೊಹ್ಲಿಯ ಕೋಪಕ್ಕೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಶಿಖರ್ ಧವನ್ ಅದೇ ಹಾದಿ ಹಿಡಿಯುತ್ತಿದ್ದಾರಾ ಎನ್ನುವ ಮಾತುಗಳು ದಟ್ಟವಾಗತೊಡಗಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಧವನ್ ಸಮಧಾನಕರ ಪ್ರದರ್ಶನ ತೋರಿದ್ದರೂ, ಕಳೆದ 9 ಟಿ20 ಇನಿಂಗ್ಸ್’ಗಳಲ್ಲಿ ಧವನ್ ಒಮ್ಮೆಯೂ ಅರ್ಧಶತಕ ಬಾರಿಸಲು ಯಶಸ್ವಿಯಾಗಿಲ್ಲ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಧವನ್ ಅವರನ್ನು ಕೈಬಿಡಲು ಸಿದ್ದತೆ ನಡೆಯುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.

ಹೀಗಾಗಲೇ ಟೆಸ್ಟ್ ತಂಡದಿಂದ ಕಿಕೌಟ್ ಆಗಿರುವ ಧವನ್, ಇದೀಗ ಸೀಮಿತ ಓವರ್ ಗಳ ಕ್ರಿಕೆಟ್’ನಿಂದಲೂ ದೂರ ಉಳಿದರೆ ಅಚ್ಚರಿಯಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Related Video