ಬೆಂಗಳೂರು ಬುಲ್ಸ್‌ ಫ್ಯಾನ್ಸ್‌ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ತಿದ್ದೇನೆ: ಪವನ್ ಶೆರಾವತ್

ಇಂದಿನಿಂದ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಚಾಲನೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಪವನ್ ಶೆರಾವತ್ ಮನದಾಳದ ಮಾತು
ಬೆಂಗಳೂರು ಅಭಿಮಾನಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಶೆರಾವತ್

Share this Video
  • FB
  • Linkdin
  • Whatsapp

ಬೆಂಗಳೂರು(ಅ.07): ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಕಳೆದ ಕೆಲ ವರ್ಷಗಳಿಂದ ಬೆಂಗಳೂರು ಬುಲ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಸ್ಟಾರ್ ರೈಡರ್ ಪವನ್ ಶೆರಾವತ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. 

ಬೆಂಗಳೂರಿನ ಅಭಿಮಾನಿಗಳು ನನ್ನ ಮೇಲೆ ತುಂಬಾ ಪ್ರೀತಿ ಹಾಗೂ ವಿಶ್ವಾಸವಿಟ್ಟಿದ್ದರು. ಅದೇ ರೀತಿಯ ಪ್ರೀತಿ ಹಾಗೂ ಬೆಂಬಲವನ್ನು ಅವರೆಲ್ಲರಿಂದ ನಿರೀಕ್ಷಿಸುತ್ತಿದ್ದೇನೆ. ಬೆಂಗಳೂರು ತಂಡದಿಂದ ಹೊರಹೋಗುವುದು ನನ್ನ ತೀರ್ಮಾನವಾಗಿರಲಿಲ್ಲ, ಅದು ಫ್ರಾಂಚೈಸಿಯ ನಿರ್ಧಾರವಾಗಿತ್ತು. ಬೆಂಗಳೂರು ಅಭಿಮಾನಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಮಿಳ್ ತಲೈವಾಸ್ ತಂಡದ ನಾಯಕ ಪವನ್ ಶೆರಾವತ್ ಹೇಳಿದ್ದಾರೆ.

Pro Kabaddi League: ಹೇಗಿದೆ 12 ಕಬಡ್ಡಿ ತಂಡಗಳ ಬಲಾಬಲ..?

Related Video