Ultimate Kho Kho ಗುಜರಾತ್ ಜೈಂಟ್ಸ್‌ ಬಗ್ಗುಬಡಿದು ಫೈನಲ್‌ ಪ್ರವೇಶಿಸಿದ ಒಡಿಶಾ ಜುಗರ್‌ನಟ್ಸ್‌

ಗುಜರಾತ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಒಡಿಶಾ ಜುಗರ್‌ನಟ್ಸ್‌
ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ 57-43 ಅಂಕಗಳ ಅಂತರದ ಭರ್ಜರಿ ಜಯ
ಒಡಿಶಾ ಪರ 13 ಅಂಕಗಳಿಸಿ ಮಿಂಚಿದ ಸೂರಜ್ ಲಾಂಡೆ
ಫೈನಲ್‌ನಲ್ಲಿ ಸೋತ ಗುಜರಾತ್ ತಂಡಕ್ಕೆ ಫೈನಲ್‌ಗೇರಲು ಇದೆ ಮತ್ತೊಂದು ಅವಕಾಶ
 

Share this Video
  • FB
  • Linkdin
  • Whatsapp

ಪುಣೆ(ಸೆ.03): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಒಡಿಶಾ ಜುಗರ್‌ನಟ್ಸ್‌ ತಂಡವು 57-43 ಅಂಕಗಳಿಂದ ಗುಜರಾತ್ ತಂಡವನ್ನು ಮಣಿಸಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. 5 ಆಟಗಾರರನ್ನು ಔಟ್ ಮಾಡುವ ಮೂಲಕ ಒಟ್ಟು 13 ಅಂಕಗಳನ್ನು ಗಳಿಸಿದ ಸೂರಜ್ ಲಾಂಡೆ ಒಡಿಶಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಲ್ಲಿನ ಶ್ರೀ ಶಿವ್ ಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಒಡಿಶಾ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಸೆಪ್ಟೆಂಬರ್ 04ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ಒಡಿಶಾ ಜುಗರ್‌ನಟ್ಸ್‌ ತಂಡ. ಗುಜರಾತ್ ಜೈಂಟ್ಸ್‌ ಹಾಗೂ ಒಡಿಶಾ ಜುಗರ್‌ನಟ್ಸ್‌ ತಂಡಗಳ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದ ಹೈಲೈಟ್ಸ್‌ ಇಲ್ಲಿದೆ ನೋಡಿ

Related Video