ICC ರ‍್ಯಾಂಕಿಂಗ್‌'ನಲ್ಲಿ ಭಾರತೀಯರದ್ದೇ ದರ್ಬಾರ್..!

ICC ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಆಟಗಾರರು ನಾನಾ ಕಸರತ್ತು ನಡೆಸುತ್ತಿರುತ್ತಾರೆ. ಅಂತಹದ್ದರಲ್ಲಿ ಭಾರತದ ಕ್ರಿಕೆಟ್ ಪಟುಗಳು ಮೊದಲೆರಡು ಸ್ಥಾನಗಳಲ್ಲಿ ಲಗ್ಗೆಯಿಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ICC ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಆಟಗಾರರು ನಾನಾ ಕಸರತ್ತು ನಡೆಸುತ್ತಿರುತ್ತಾರೆ. ಅಂತಹದ್ದರಲ್ಲಿ ಭಾರತದ ಕ್ರಿಕೆಟ್ ಪಟುಗಳು ಮೊದಲೆರಡು ಸ್ಥಾನಗಳಲ್ಲಿ ಲಗ್ಗೆಯಿಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಅರೇ, ಅದರಲ್ಲೇನು ವಿಶೇಷ ಅಂತಿರಾ..? ಅಲ್ಲೇ ಇರೋದು ನೋಡಿ, ಟ್ವಿಸ್ಟ್. ಭಾರತದ ಪುರುಷರ ಏಕದಿನ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ, ಬೌಲಿಂಗ್’ನಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಮಹಿಳಾ ತಂಡದವರು ನಾವೇನು ಕಮ್ಮಿ ಇಲ್ಲ ಎನ್ನುವಂತೆ ಸ್ಮೃತಿ ಮಂಧನಾ ಬ್ಯಾಟಿಂಗ್ ವಿಭಾಗದಲ್ಲಿ ಹಾಗೆಯೇ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ನಂ.1 ಸ್ಥಾನಕ್ಕೇರಿ ಇತಿಹಾಸ ಬರೆದಿದ್ದಾರೆ.

Related Video