ಬೆಂಗ್ಳೂರಲ್ಲಿ ಚಿನ್ನದ ಹುಡುಗ: ಒಂದು ವೈಫಲ್ಯದಿಂದ ನಿರಾಶೆಗೊಳಗಾಗಬೇಡಿ ಮಕ್ಕಳಿಗೆ ನೀರಜ್ ಚೋಪ್ರಾ ಕಿವಿಮಾತು..!

ಒಲಿಂಪಿಕ್ಸ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಬೆಂಗಳೂರಿಗೆ ಭೇಟಿ
ಬೆಂಗಳೂರಿನ ಯಲಹಂಕದಲ್ಲಿರುವ ವಿಶ್ವ ವಿದ್ಯಾಪೀಠ ಶಾಲೆಗೆ ಭೇಟಿ
ಕ್ರೀಡೆಯಲ್ಲಿ ಆಸಕ್ತಿಯಿರುವ ಸುಮಾರು 30 ಮಕ್ಕಳೊಂದಿಗೆ ಅನುಭವ ಹಂಚಿಕೊಂಡ ನೀರಜ್

First Published Mar 27, 2023, 1:42 PM IST | Last Updated Mar 27, 2023, 1:42 PM IST

ಬೆಂಗಳೂರು(ಮಾ.27): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ, ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ದಿಢೀರ್ ಎನ್ನುವಂತೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. 

ತಮ್ಮ ನೆಚ್ಚಿನ ಅಥ್ಲೀಟ್‌ ನೋಡುತ್ತಿದ್ದಂತೆಯೇ ವಿದ್ಯಾರ್ಥಿನಿಯೊಬ್ಬಳು, ಕಣ್ಣೀರಿಟ್ಟಿದ್ದಾಳೆ. ತಕ್ಷಣವೇ ನೀರಜ್ ಚೋಪ್ರಾ ಆಕೆಯನ್ನು ತಬ್ಬಿಕೊಂಡು ಸಂತೈಸಿದ್ದಾರೆ. ಇದಷ್ಟೇ ಅಲ್ಲದೇ ಮಕ್ಕಳ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

ಸ್ವಿಸ್‌ ಓಪನ್‌ ಗೆದ್ದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ -ಚಿರಾಗ್‌ ಶೆಟ್ಟಿ ಜೋಡಿ!

ಅಥ್ಲೀಟ್‌ ಆದವರ ಗುರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದಾಗಿರುತ್ತದೆ. ಚಿನ್ನ ಗೆದ್ದಾಗ ನಮ್ಮ ರಾಷ್ಟ್ರಗೀತೆ ಮೊಳಗುವುದನ್ನು ಕೇಳುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಒಂದು ಸೋಲಿನಿಂದ ಹತಾಶೆಗೊಳಗಾಗಬೇಡಿ. ಗೆಲುವಿಗಾಗಿ ನಿರಂತರವಾಗಿ ಪ್ರಯತ್ನಪಡಿ ಎಂದು ನೀರಜ್ ಚೋಪ್ರಾ ಕಿವಿ ಮಾತು ಹೇಳಿದ್ದಾರೆ.