
ರಿಪಬ್ಲಿಕ್ ಆಫ್ ಭದ್ರಾವತಿಯ ಭಾಗ-3: ಅಮಾಯಕರ ಮೇಲೆ ಪೊಲೀಸರ ಕ್ರೌರ್ಯ
ಪೊಲೀಸ್ ಠಾಣೆಗಳಲ್ಲಿ ರಾವಣ ರಾಜ್ಯ , ಅಮಾಯಕರನ್ನು ಹಿಗ್ಗಾ ಮುಗ್ಗ ಥಳಿಸುತ್ತಾರೆ ಪೊಲೀಸ್ ಅಧಿಕಾರಿಗಳು, ಯಾವುದೇ ಕಂಪ್ಲೇಂಟ್ ಬೇಕಾಗಿಲ್ಲ ಎಫ್ಐಆರ್ ಅಂತು ಇಲ್ಲವೇ ಇಲ್ಲ ಆದ್ರೂ ಬೀಳುತ್ತೆ ಒದೆ, ಏನಿದು ರಿಪಬ್ಲಿಕ್ ಆಫ್ ಭದ್ರಾವತಿಯ ಭಾಗ-3
ರಿಪಬ್ಲಿಕ್ ಆಫ್ ಭದ್ರಾವತಿ ಕರಾಳ ಸತ್ಯಗಳು ಒಂದೊಂದಾಗಿ ಹೊರಬೀಳುತ್ತಿದೆ. ಅಕ್ರಮ ಮರಳು ದಂಧೆ ನಿಲ್ಲಿಸಲು ಹೋದ ಅಧಿಕಾರಿ ಮೇಲೆ ಶಾಸಕನ ಪುತ್ರನ ದರ್ಬಾರ್ ಪ್ರಕರಣದಿಂದ ಭದ್ರಾವತಿಯ ಅಸಲಿ ಸತ್ಯ ಬಹಿರಂಗವಾಗಿದೆ. ಇದೀಗ ಪೊಲೀಸ್ ಠಾಣೆಗಲ್ಲಿ ಅಮಾಯಕರ ಮೇಲೆ ಥಳಿಸುತ್ತಿರುವ ಘಟನೆ ಬಹಿರಂಗವಾಗಿದೆ. ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಮಾನೆ ನಡೆಸಿದ ದೌರ್ಜನ್ಯ ಬಹಿರಂಗವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಭದ್ರಾವತಿ ಹೊಸಮನೆ ಭಾಗದ ತಮ್ಮಣ್ಣ ಕಾಲೋನಿಯ ಸಹೋದರರಾದ ದೀಪು ಮತ್ತು ಅನಿಲ್ ಗೆ ಬೂಟು ಕಾಲಿನಿಂದ ಒದ್ದು, ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.