News Hour: ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಶಾಕ್!

ಚಂದ್ರನ ಮೇಲೆ ವಾಸ ಮಾಡಬಹುದು ಎಂದುಕೊಂಡವರಿಗೆ ಇಸ್ರೋದ ಪ್ರಗ್ಯಾನ್‌ ರೋವರ್‌ ಮಾಡಿರುವ ಅಧ್ಯಯನ ಅಚ್ಚರಿ ನೀಡಿದೆ. ಅದಕ್ಕೆ ಕಾರಣ ಚಂದ್ರನ ಮೇಲ್ಮೈ ಮೇಲಿನ ತಾಪಮಾನದಲ್ಲಿರುವ ಅಜಗಜಾಂತರ ವ್ಯತ್ಯಾಸ.

First Published Aug 28, 2023, 11:26 PM IST | Last Updated Aug 28, 2023, 11:26 PM IST

ಬೆಂಗಳೂರು (ಆ.28): ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಇಸ್ರೋ ಅಧ್ಯಯನ ಶಾಕ್‌ ನೀಡಿದೆ. ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಸೂಕ್ತವಲ್ಲ ಎನ್ನುವ ಮಹತ್ವದ ಮಾಹಿತಿಯನ್ನು ಚಂದ್ರಯಾನ-3 ಲ್ಯಾಂಡರ್‌ ಅಧ್ಯಯನದ ವೇಳೆ ಗೊತ್ತಾಗಿದೆ.

ಚಂದ್ರನ ಮೇಲಿನ ತಾಪಮಾನವನ್ನು ಲ್ಯಾಂಡರ್ ಪರೀಕ್ಷೆ ಮಾಡಿದ್ದು, ಇದರ ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ಚಂದ್ರನ ಮೇಲೆ ಬರೋಬ್ಬರಿ 50-55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಚಂದ್ರನ 8 ಸೆಂ.ಮೀ ಮಣ್ಣಿನ ಕೆಳಗೆ -10 ಡಿಗ್ರಿ ಉಷ್ಣಾಂಶವಿದೆ. ಚಂದ್ರನ ಮೇಲ್ಮೈ ವಾತಾವರಣ ನೋಡಿ ವಿಜ್ಞಾನಿಗಳೇ ಅಚ್ಚರಿಪಟ್ಟಿದ್ದಾರೆ. ಇಷ್ಟೊಂದು ಬದಲಾವಣೆಯನ್ನು ಸ್ವತಃ ವಿಜ್ಞಾನಿಗಳು ಕೂಡ ನಿರೀಕ್ಷೆ ಮಾಡಿರಲಿಲ್ಲ. ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳು ಈ ಮಾಹಿತಿ ಹಂಚಿಕೊಂಡಿದೆ.

Chandrayaan-3: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!

ಚಂದ್ರನ ತಾಪಮಾನವನ್ನು ಲ್ಯಾಂಡರ್‌ನಲ್ಲಿದ್ದ  ChaSTE ಉಪಕರಣ ಪರೀಕ್ಷೆ ಮಾಡಿದೆ, Chandra's Surface Thermophysical Experiment ಎನ್ನುವುದು ಇದರ ವಿಸ್ತ್ರತ ರೂಪ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ತಾಪಮಾನ 50-55 ಡಿಗ್ರಿ ಸೆಲ್ಸಿಯಸ್. ಚಂದ್ರನ ಮೇಲ್ಮೈನಿಂದ 8 ಸೆಂ.ಮೀ ಆಳದಲ್ಲಿ -10 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ.