Asianet Suvarna News Asianet Suvarna News

Chandrayaan-3: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!

Pragyan Rover: ಚಂದ್ರಯಾನ-3 ಪ್ರಗ್ಯಾನ್‌ ರೋವರ್‌ನ ಮಾರ್ಗದಲ್ಲಿ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ತಿಳಿಸಿತ್ತು. ಸೋಮವಾರ ಇಸ್ರೋ ಅದರ ಚಿತ್ರಗಳನ್ನು ಪ್ರಕಟಿಸಿದೆ.
 

Chandrayaan 3 Pragyan Rover  Finds Massive Crater In Way ISRO Reroutes san
Author
First Published Aug 28, 2023, 4:59 PM IST

ಬೆಂಗಳೂರು (ಆ.28): ಚಂದ್ರನ ಮೇಲೆ ತನ್ನ ಪರಿಶೋಧನೆಯಲ್ಲಿ ತೊಡಗಿರುವ ಪ್ರಗ್ಯಾನ್‌ ರೋವರ್‌ಗೆ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ತಿಳಿಸಿತ್ತು. ಸೋಮವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ, ವಿಕ್ರಮ್‌ ಲ್ಯಾಂಡರ್‌ನ ನ್ಯಾವಿಗೇಷನ್‌ ಕ್ಯಾಮೆರಾದಿಂದ ಸೆರೆಹಿಡಿದ ಆ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. 'ಆಗಸ್ಟ್‌ 27 ರಂದು ತಾನಿದ್ದ ಸ್ಥಳದಿಂದ ಕೇವಲ ಮೂರು ಮೀಟರ್‌ ದೂರದಲ್ಲಿ ದೊಡ್ಡ ಕುಳಿಯನ್ನು ಗಮನಿಸಿದೆ.  ಅಂದಾಜು 4 ಮೀಟರ್‌ ಸುತ್ತಳತೆಯ ಕುಳಿ ಇದಾಗಿತ್ತು ಎಂದು ಇಸ್ರೋ ತಿಳಿಸಿದೆ. ಆ ಬಳಿಕ ರೋವರ್‌ಗೆ ತನ್ನ ಮಾರ್ಗವನ್ನು ಬದಲಾವಣೆ ಮಾಡುವಂತೆ ಇಸ್ರೋ ಕಮಾಂಡ್‌ ಮಾಡಿತ್ತು. ಈಗ ರೋವರ್‌ ಹೊಸ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದೆ' ಎಂದು ಇಸ್ರೋ ಟ್ವೀಟ್‌ ಮಾಡಿದೆ.ಆರು-ಚಕ್ರಗಳ, ಸೌರ-ಚಾಲಿತ ರೋವರ್ ಚಂದ್ರನ ಮೇಲೆ ಹಿಂದೆ ಎಂದೂ ಮ್ಯಾಪ್ ಮಾಡದ ಪ್ರದೇಶದ ಸುತ್ತಲೂ ಸುತ್ತುತ್ತದೆ ಮತ್ತು ಅದರ ಎರಡು ವಾರಗಳ ಜೀವಿತಾವಧಿಯಲ್ಲಿ ಚಿತ್ರಗಳು ಮತ್ತು ವೈಜ್ಞಾನಿಕ ಡೇಟಾವನ್ನು ಭೂಮಿಗೆ ರವಾನಿಸುತ್ತದೆ. ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಉಳಿದಿವೆ, ಭಾನುವಾರ ಮಾತನಾಡಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ ದೇಸಾಯಿ, ಚಂದ್ರಯಾನ -3 ರ ರೋವರ್ ಮಾಡ್ಯೂಲ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಸಮಯದ ವಿರುದ್ಧವಾಗಿ ಓಡಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ. ಅರು ಚಕ್ರಗಳ ರೋವರ್‌ ತನ್ನ ಜೀವಿತಾವಧಿಯಲ್ಲಿ ಚಂದ್ರನ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಚಂದ್ರನ ಮೇಲೆ ಭಾರತವು ಆಗಸ್ಟ್‌ 23 ರಂದು ದೊಡ್ಡ ಹೆಜ್ಜೆ ಇರಿಸಿತ್ತು. ಈವರೆಗೂ ವಿಶ್ವದ ಯಾವುದೇ ರಾಷ್ಟ್ರ ಮಾಡದ ಸಾಧನೆಯನ್ನು ಇಸ್ರೋ ಮಾಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ಅನ್ನು ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಮೂಲಕ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ದೇಶ ಎನಿಸಿತ್ತು. ಇಲ್ಲಿಯವರೆಗೂ ಅಮೆರಿಕ, ಚೀನಾ ಹಾಗೂ ರಷ್ಯಾ  ದೇಶಗಳು ಮಾತ್ರವೇ ಚಂದ್ರನ ಮೇಲೆ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡಿಸಿದ್ದವು. ಈಗ ಈ ಸಾಲಿಗೆ ಭಾರತ ಕೂಡ ಸೇರಿದೆ. ಪ್ರಸ್ತುತ ಭಾರತ ಹೊರತಾಗಿ ಚೀನಾದ ರೋವರ್‌ ಮಾತ್ರವೇ ಚಂದ್ರನ ಮೇಲೆ ತಿರುಗಾಟ ನಡೆಸುತ್ತಿದೆ.

ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ಮಾಡ್ಯೂಲ್ ತನ್ನ ಪ್ರಯೋಗಗಳ ಸೆಟ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ ಮತ್ತು ನಂತರ ಅವುಗಳನ್ನು ದೇಶದ ಬಾಹ್ಯಾಕಾಶ ಸಂಸ್ಥೆಯ ಪ್ರಧಾನ ಕಛೇರಿಗೆ ತಿಳಿಸಿದೆ ಎಂದು ಇಸ್ರೋ ಭಾನುವಾರ ತಿಳಿಸಿತ್ತು.

ಸೂರ್ಯಶಿಖಾರಿಗೆ ಮಹೂರ್ತ ಫಿಕ್ಸ್‌, ಸೆ.2ಕ್ಕೆ ಆದಿತ್ಯ ಎಲ್‌-1 ಉಡಾವಣೆ: ಇಸ್ರೋ ಅಧಿಕೃತ ಟ್ವೀಟ್‌

ಬಾಹ್ಯಾಕಾಶ ಏಜೆನ್ಸಿಯು ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್‌ನಲ್ಲಿರುವ ChaSTE ಪೇಲೋಡ್‌ನಿಂದ ಅಳೆಯಲಾದ ಆಳದಲ್ಲಿನ ಹೆಚ್ಚಳದೊಂದಿಗೆ ಚಂದ್ರನ ಮೇಲ್ಮೈಯಲ್ಲಿನ ತಾಪಮಾನ ವ್ಯತ್ಯಾಸದ ಗ್ರಾಫ್ ಅನ್ನು ಸಹ ಬಿಡುಗಡೆ ಮಾಡಿದೆ.

ಚಂದ್ರನ ಮೇಲಿನ ಕುಳಿಗಳ ಅಧ್ಯಯನ ಆರಂಭಿಸಿದ ರೋವರ್, ಇಸ್ರೋ ಸಾಧನೆಗೆ ಸಲಾಂ!

 

Follow Us:
Download App:
  • android
  • ios