ಬ್ಯಾಂಗಲ್ ಬಂಗಾರಿ ಜೊತೆ ದೊಡ್ಮನೆ ಹುಡ್ಗನ ನಗಾರಿ: ಟ್ರೆಂಡಿಂಗ್​ನಲ್ಲಿದೆ 'ಎಕ್ಕ' ಚಿತ್ರದ ಸಾಂಗ್!

ಯುವ ರಾಜ್​ಕುಮಾರ್ ನಟನೆಯ ಎಕ್ಕ ಸಿನಿಮಾ ಹೊಸ ಸಾಂಗ್ ರಿಲೀಸ್ ಆಗಿದ್ದು, ಫುಲ್ ಟ್ರೆಂಡಿಂಗ್​ನಲ್ಲಿದೆ. ಬ್ಯಾಂಗಲ್ ಬಂಗಾರಿ ಹಿಂದೆ ಬಿದ್ದಿರೋ ದೊಡ್ಮನೆ ಹುಡ್ಗ ನಗಾರಿ ಬಾರಿಸ್ತಾ ಇದ್ದಾನೆ.

Share this Video
  • FB
  • Linkdin
  • Whatsapp

ಯುವ‌ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಎಕ್ಕ ಸಿನಿಮಾದಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ಈಗ ಬ್ಯಾಂಗಲ್‌ ಬಂಗಾರಿ ಅನ್ನೋ ಸಾಂಗ್​​ನ ರಿಲೀಸ್ ಮಾಡಿದ್ದು, ಫ್ಯಾನ್ಸ್​ನ ಹುಚ್ಚೆದ್ದು ಕುಣಿವಂತೆ ಮಾಡಿದೆ. ಯೆಸ್ ಯುವ ರಾಜ್​ಕುಮಾರ್ ನಟನೆಯ ಎಕ್ಕ ಸಿನಿಮಾ ಹೊಸ ಸಾಂಗ್ ರಿಲೀಸ್ ಆಗಿದ್ದು, ಫುಲ್ ಟ್ರೆಂಡಿಂಗ್​ನಲ್ಲಿದೆ. ಬ್ಯಾಂಗಲ್ ಬಂಗಾರಿ ಹಿಂದೆ ಬಿದ್ದಿರೋ ದೊಡ್ಮನೆ ಹುಡ್ಗ ನಗಾರಿ ಬಾರಿಸ್ತಾ ಇದ್ದಾನೆ. ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗರೊಯಾಗಿ ಹೆಜ್ಜೆ ಹಾಕಿದ್ರೆ, ಯುವ ಮಾಸ್ ಲುಕ್​ನಲ್ಲಿ ಮಸ್ತಾಗಿ ಕುಣಿದಿದ್ದಾರೆ. ಈ ಟ್ರೆಂಡಿ ಹಾಡಿಗೆ ನಾಗಾರ್ಜುನ್ ಶರ್ಮಾ ಲಿರಿಕ್ಸ್ ಬರೆದಿದ್ದಾರೆ.

ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ, ಚರಣ್ ರಾಜ್ ಸಂಗೀತ ನೀಡಿದ್ದು, ಅಂತೋನಿ ದಾಸನ್ 'ಬ್ಯಾಂಗಲ್ ಬಂಗಾರಿ' ಧ್ವನಿಯಾಗಿದ್ದು, ಅವರ ಧ್ವನಿಯಲ್ಲಿ ಹಾಡು ಮಸ್ತ್ ಮತ್ತೇರಸ್ತಾ ಇದೆ. 'ಎಕ್ಕ' ಸಿನಿಮಾವನ್ನ ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗ್ತಾ ಇದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ನಾಯಕ ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೊಡ್ಮನೆ ಫ್ಯಾನ್ಸ್ ನಡುವೆ ದೊಡ್ಡ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಜುಲೈ 18ಕ್ಕೆ ರಿಲೀಸ್‌ ಆಗಲಿದೆ.

Related Video