
ಅಪ್ಪು ಬರ್ತ್ಡೇ ದಿನ ಎಕ್ಕ ಮೊದಲ ಸಾಂಗ್ ರಿಲೀಸ್, ರಗಡ್ ಅವತಾರದಲ್ಲಿ ಮಿಂಚಿದ ಯುವರಾಜ್ಕುಮಾರ್
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಎಕ್ಕ' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ.
ಯುವ ಬಳಿಕ ಯುವರಾಜ್ಕುಮಾರ್ ನಟನೆಯಲ್ಲಿ ಬರ್ತಾ ಇರೋ ಎರಡನೇ ಚಿತ್ರದ ಎಕ್ಕ. ಅಪ್ಪು ಬರ್ತ್ ಡೇ ವಿಶೇಷವಾಗಿ ಎಕ್ಕ ಮೊದಲ ಸಾಂಗ್ ರಿಲೀಸ್ ಆಗಿದೆ. ಚರಣ್ ರಾಜ್ ಸಂಗೀತದಲ್ಲಿ ನಾಗಾರ್ಜುನ ಶರ್ಮಾ 'ಎಕ್ಕ' ಮಾರ್ ಮಾರ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಹಾಡು ಹಾಡಿದ್ದು ರೋಹಿತ್, ವಿ. ಎಂ ಮಹಾಲಿಂಗಂ ದನಿಗೂಡಿಸಿದ್ದಾರೆ. ಸದ್ಯ ಎಕ್ಕಾ ಮಾರ್ ಲಿರಿಕಲ್ ಸಾಂಗ್ ಸಖತ್ ಸದ್ದು ಮಾಡ್ತಾ ಇದೆ.