ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!
ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.
'ಮುಂಗಾರುಮಳೆ' ಸೃಷ್ಟಿಸಿದ ನಿರ್ಮಾಪಕ-ನಿರ್ದೇಶಕರ ಜೋಡಿ ಈಗ ಮನದ ಕಡಲನ್ನ (Manada Kadalu) ಕನ್ನಡಿಗರ ಎದುರು ತರ್ತಾ ಇದೆ. ಯೋಗರಾಜ್ ಭಟ್ಟರ (Yogaraj Bhat) ಸಿನಿಮಾ ಅಂದ ಮೇಲೆ ಹಾಡುಗಳ ಹಬ್ಬದ ಇದ್ದೇ ಇರುತ್ತೆ. ಈ ಹಿಂದೆ ಮೆಲೋಡಿ ಸಾಂಗ್ನ ರಿಲೀಸ್ ಮಾಡಿ ಮೋಡಿ 'ಮನದ ಕಡಲು' ತಂಡ ಈಗ ಚಿತ್ರದ ಇನ್ನೊಂದು ಡಿಫ್ರೆಂಟ್ನ ಸಾಂಗ್ ನ ಪ್ರೇಕ್ಷಕರ ಮುಂದೆ ತಂದಿದೆ.
ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.
ಯೋಗರಾಜ್ ಭಟ್ ಅವರೇ ಬರೆದಿರುವ ಈ ಹಾಡನ್ನ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ. ಈ ಹಾಡಿನ ಅರ್ಥ ಏನು ಅಂತ ತಲೆಕೆಡಿಸಿಕೊಂಡಿದ್ರೆ, ಅದನ್ನ ಖುದ್ದು ಯೋಗರಾಜ್ ಭಟ್ಟರೇ ಹೇಳ್ತಾರೆ ಕೇಳಿ.
ಈ ಹಾಡಿಗೆ ಸುಮುಖ, ಅಂಜಲಿ, ರಂಗಾಯಣ ರಘು ಹೆಜ್ಜೆ ಹಾಕಿದ್ದು ಕಾಡು ಮನುಷ್ಯರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿಯಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಈ ಹಾಡನ್ನ ಈ ದಶಕದ ಅತ್ಯಂತ ಅರ್ಥಪೂರ್ಣ ಹಾಡು ಅಂತ ಕರೆದಿದ್ದಾರೆ ಭಟ್ರು. ಸೋ ಕೇಳ್ತಾ ಏನಾದ್ರೂ ಅರ್ಥ ಆಗುತ್ತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..