Asianet Suvarna News Asianet Suvarna News

ಮತ್ತೆ ಗಾಳಿಪಟ ಹಾರಿಸಲು ಸಜ್ಜು ಭಟ್ರ ಹುಡುಗ್ರು! ಈ ಭಾರಿ ಹೇಗಿರುತ್ತೆ ಗಾಳಿಪಟ-2?

ಯೋಗರಾಜ್‌ ಭಟ್‌ ತಂಡ ಮತ್ತೆ ಜಾದು ಮಾಡುವುದಕ್ಕೆ ಸಜ್ಜಾಗಿದೆ. ಈ ಬಾರಿ ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ಭಟ್ರು ಮತ್ತೆ ಗಾಳಿಪಟ ಹಿಡಿದಿದ್ದು, ಮತ್ತೆ ಮುಗಿಲೆತ್ತರಕ್ಕೆ ಗಾಳಿಪಟ-2 ಹಾರಿಸುವುದಕ್ಕೆ ಸಿದ್ಧರಾಗಿದ್ದಾರೆ.  

ಯೋಗರಾಜ್‌ ಭಟ್‌ ತಂಡ ಮತ್ತೆ ಜಾದು ಮಾಡುವುದಕ್ಕೆ ಸಜ್ಜಾಗಿದೆ. ಈ ಬಾರಿ ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ಭಟ್ರು ಮತ್ತೆ ಗಾಳಿಪಟ ಹಿಡಿದಿದ್ದು, ಮತ್ತೆ ಮುಗಿಲೆತ್ತರಕ್ಕೆ ಗಾಳಿಪಟ-2 ಹಾರಿಸುವುದಕ್ಕೆ ಸಿದ್ಧರಾಗಿದ್ದಾರೆ.  

14 ವರ್ಷಗಳ ನಂತ್ರ ವಿಕಟಕವಿ ಯೋಗರಾಜ್ ಭಟ್ ಗೋಲ್ಡನ್ ಗಣಪನ ಜೊತೆ ಸೇರಿ ಎರಡನೇ ಗಾಳಿಪಟ ಹಾರಿಸ್ತಿದ್ದಾರೆ. ಆದ್ರೆ ಈ ಗಾಳಿಪಟ ಹಾಡಿಸೋಕು ಮೊದ್ಲೆ ಭಟ್ರು, ಗಣಿ, ದಿಗ್ಗಿ, ಪವನ್ ಕೈಲಿ ಎಕ್ಸಾಂ ಬರೆಸಿದ್ದಾರೆ. ಭಟ್ಟರು ಕೊಟ್ಟಿರೋ ಎಕ್ಸಾಂ ಕ್ವಶ್ಚನ್ ಪೇಪರ್ ಕಂಡು ಗಣಿ ಮತ್ತು ಸ್ನೇಹಿತರು ಬಾಯ್ ಬಾಯ್ ಬಡ್ಕೋತಿದ್ದಾರೆ. ಈಗ ಎಲ್ಲಾ ಸ್ಟುಡೆಂಟ್ಸ್‌ಗೆ ಪರೀಕ್ಷೆ ಸಮಯ. ಹೀಗಾಗಿ ಅದ್ಧೂರಿ ಕಾರ್ಯಕ್ರಮ ಮಾಡಿದ ಭಟ್ರ ಟೀಂ ಗಾಳಿಪಟ-2 ಸಿನಿಮಾದ ಎಕ್ಸಾಂ ಹಾಡನ್ನ ರಿಲೀಸ್ ಮಾಡಿದ್ದಾರೆ. ಅಷ್ಟೆ ಅಲ್ಲ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಗಣಿ, ದಿಗ್ಗಿ, ತಮ್ಮ ಲೈಫ್ನ ರಿಯಲ್ ಎಕ್ಸಾಂ ಕಥೆಯನ್ನ ಹಂಚಿಕೊಂಡಿದ್ದಾರೆ.

'ಗಾಳಿಪಟ ಎಂದರೆ ಎಮೋಷನ್ ಅಂತ ಓದಿದ್ದೆ, ಗಾಳಿಪಟ-2 ಕತೆ ಕೇಳಿದ ಬಳಿಕ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದೆ'

ಮುಂಗಾರು ಮಳೆಯಂತಹ ಹಿಟ್ ಸಿನಿಮಾ ಕೊಟ್ಟ ಮೇಲೆ ಯೋಗರಾಜ್ ಭಟ್ ಗಣೇಶ್ 2008 ರಲ್ಲಿ ಗಾಳಿಪಟ ಹಾರಿಸಿದ್ರು. ಗಾಳಿಪಟ ಕೂಡ ಶತದಿನ ಬಾರಿಸಿತ್ತು. ಅದ್ರೆ ಅದ್ಯಾಕೋ ಗೊತ್ತಿಲ್ಲ ಮತ್ತೆ ಈ ಜೋಡಿ ಗಾಳಿಪಟದ ಸಹವಾಸಕ್ಕೆ ಹೋಗಿರಲಿಲ್ಲ .ಅದರೆ ಸಡನ್ ಆಗಿ ಭಟರ ತಲೆಯಲ್ಲಿ ಹೊಸ ಕತೆ ಚಿಗುರಿತ್ತು. ಆ ಕತೆಗೆ ಗಾಳಿಪಟ-2 ಅಂತ ಹೆಸರಿಟ್ಟು ಚಿತ್ರಪ್ರೇಮಿಗಳಗೆ ಉಣಬಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಲಾವಿದರ ದಂಡೆ ಇದೆ. ಶರ್ಮಿಳಾ ಮಾಂಡ್ರೆ, ವೈಭವಿ, ನಿಶ್ವಿಕಾ ನಾಯ್ಡು ಸೇರಿ ಒಟ್ಟು ನಾಲ್ಕು ನಾಯಕಿಯರು ಗಾಳಿಪಟ ಹಿಡಿದ್ರೆ, ಇವರಿಗೆಲ್ಲ ಹೆಡ್ ಮಾಸ್ಟರ್ ತರ ಹಿರಿಯ ನಟ ಅನಂತ್ ನಾಗ್, ರಂಗಾಯಣ ರಘು ಚಿತ್ರದಲ್ಲಿ ಹಾಸ್ಯ ಹೊನಲು ಹರಿಸಿದ್ದಾರೆ. 

ಸ್ಟೂಡೆಂಟ್ ಲೈಫ್ ನ ಪ್ರಮುಖ ಘಟ್ಟ ಎಕ್ಸಾಂ.. ಈ ಎಕ್ಸಾಂ ಅನ್ನೋ ಫಿಯರ್ ಗೆ ಮೂಲಮ್ ನ ಹಾಗೆ ಗಾಳಿಪಟ2 ಎಕ್ಸಾಂ ಹಾಡನ್ನ ಕೊಟ್ಟಿದ್ದಾರೆ ಭಟ್ರು. ಅರ್ಜುನ್ ಜನ್ಯ ಟ್ಯೂನ್ ಈ ಹಾಡಿಗೆ ಸಿಕ್ಕಿದ್ದು ಭಟ್ಟರ ಪದಗಳಿಗೆ ವಿಜಯ್ ಪ್ರಕಾಶ್ ಕಂಠ ಧಾನ ಮಾಡಿದ್ದಾರೆ. ಗಾಳಿಪಟ2 ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ.

Video Top Stories