Asianet Suvarna News Asianet Suvarna News

'ಗಾಳಿಪಟ ಎಂದರೆ ಎಮೋಷನ್ ಅಂತ ಓದಿದ್ದೆ. ಗಾಳಿಪಟ-2 ಕಥೆ ಕೇಳಿದ ಬಳಿಕ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದೆ'

ಗಾಳಿಪಟ ಎಂದರೆ ಎಮೋಷನ್ ಅಂತ ಓದಿದ್ದೆ. ಗಾಳಿಪಟ-2 ಕಥೆ ಕೇಳಿದ ಬಳಿಕ ಹುಚ್ಚು ಹಿಡಿದಿಯಾ ಎಂದು ಕೇಳಿದ್ದೆ, ಎಂದು ಗೋಲ್ಡನ್ ಸ್ಟಾರ್ ಗಣೇಶ್  ಗಾಳಿಪಟ-2 ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ.

 

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಸಾರಥ್ಯದಲ್ಲಿ ಬರ್ತಿರುವ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಗಾಳಿಪಟ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದ ಭಟ್ರು ಇದೀಗ ಪಾರ್ಟ್-2 ಮೂಲಕ ಮತ್ತೆ ಬರ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ವೇಳೆ ಸಿನಿಮಾತಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

ಗಾಳಿಪಟ ಎಂದರೆ ಎಮೋಷನ್ ಅಂತ ಓದಿದ್ದೆ. ಗಾಳಿಪಟ-2 ಕಥೆ ಕೇಳಿದ ಬಳಿಕ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದೆ. ಭಟ್ರು ಹೇಳಿದ್ರು ಅದೇನ್ ಕಿತ್ ದಬಾಕ್ತಿಯೋ ಹಾಕು ಅಂತ ಹೇಳಿದ್ರು. ನಾನಾ ನೀನಾ ನೋಡೆ ಬಿಡೋಣ ಎಂದು ಚಾಲೆಂಜ್ ಹಾಕಿದ್ರು. ಆದರೆ ಕೊನೆಗೆ ನಾನೇ ಗೆದ್ದಿದ್ದು ಎಂದು ಹೇಳಿದ್ದಾರೆ. ಡಬ್ಬಿಂಗ್ ಮಾಡುವ ವೇಳೆ ಮೊದಲ ಬಾರಿಗೆ ಭಟ್ಟರ ಕಣ್ಣಲ್ಲಿ ನೀರು ನೋಡಿದೆ ಎಂದು ಹೇಳಿದರು. ಇದೇ ಸಮಯದಲ್ಲಿ ಇಡೀ ತಂಡದ ಬಗ್ಗೆ ಮಾತನಾಡಿದರು.