ಟಾಕ್ಸಿಕ್ ವರ್ಲ್ಡ್ವೈಡ್ ರಿಲೀಸ್ ಮಾಡೋದಕ್ಕೆ ಯಶ್ ಸಜ್ಜು: 20th ಸೆಂಚುರಿ ಸ್ಟುಡಿಯೋ ಜೊತೆ ಕೈ ಜೋಡಿಸಿದ ರಾಕಿ
ಕೆಜಿಎಫ್-2 ನಂತರ ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ತೆಗೆದುಕೊಂಡಿರೋ ರಾಕಿಂಗ್ ಸ್ಟಾರ್, ಇಡೀ ಪ್ರಪಂಚವೇ ತಿರುಗಿ ನೋಡುವಂಥಾ ಸಿನಿಮಾ ಮಾಡೋ ಪಣ ತೊಟ್ಟಿದ್ದಾರೆ. ಯಶ್ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಟಾಕ್ಸಿಕ್ ಈ ವರ್ಷ ಸೆಕೆಂಡ್ ಹಾಫ್ನಲ್ಲಿ ತೆರೆಗೆ ಬರಲಿದೆ.
ಕೆಜಿಎಫ್-2 ನಂತರ ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ತೆಗೆದುಕೊಂಡಿರೋ ರಾಕಿಂಗ್ ಸ್ಟಾರ್, ಇಡೀ ಪ್ರಪಂಚವೇ ತಿರುಗಿ ನೋಡುವಂಥಾ ಸಿನಿಮಾ ಮಾಡೋ ಪಣ ತೊಟ್ಟಿದ್ದಾರೆ. ಯಶ್ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಟಾಕ್ಸಿಕ್ ಈ ವರ್ಷ ಸೆಕೆಂಡ್ ಹಾಫ್ನಲ್ಲಿ ತೆರೆಗೆ ಬರಲಿದೆ. ಇನ್ನೂ ಈ ಸಿನಿಮಾವನ್ನ ಇಡೀ ವಿಶ್ವಕ್ಕೆ ತಲುಪಿಸೋದಕ್ಕೆ ರಾಕಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಯೋಚಿಸೋದೆಲ್ಲಾ ದೊಡ್ಡದಾಗಿ, ಯೋಜಿಸೋದು ಕೂಡ ದೊಡ್ಡದಾಗೇ.. ಸದ್ಯ ಕೆಜಿಎಫ್ ಸೀರೀಸ್ ನಂತರ ಯಶ್ ಇಷ್ಟೊಂದು ಗ್ಯಾಪ್ ತೆಗೆದುಕೊಂಡಿರೋದು ಕೂಡ ಅಂಥದ್ದೊಂದು ದೊಡ್ಡ ಪ್ಲ್ಯಾನ್ ಇಟ್ಟುಕೊಂಡೇ.
ಟಾಕ್ಸಿಕ್ ಅನ್ನೋ ಬಿಗ್ ಬಜೆಟ್ , ಮೆಗಾಪ್ರಾಜೆಕ್ಟ್ ರೆಡಿ ಮಾಡ್ತಿರೋ ಯಶ್, ಇದರ ಮೇಕಿಂಗ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದಾರೆ ಅನ್ನೋದು ಗೊತ್ತೇ ಇದೆ. ಕೋಟಿ ಕೋಟಿ ವೆಚ್ಚದ ಸೆಟ್ಗಳನ್ನ ನಿರ್ಮಿಸಿ ಹಾಲಿವುಡ್, ಬಾಲಿವುಡ್ ತಂತ್ರಜ್ಞರನ್ನ ಸೇರಿಸಿ ಶೂಟಿಂಗ್ ಮಾಡ್ತಾ ಇದ್ದಾರೆ. ಎಲ್ಲಾ ಅಂದುಕೊಂಡಂತೇ ಆಗಿದ್ರೆ 2025ರ ಏಪ್ರಿಲ್ನಲ್ಲಿ ಟಾಕ್ಸಿಕ್ ರಿಲೀಸ್ ಆಗಬೇಕಿತ್ತು. ಆದ್ರೆ ಸದ್ಯದ ಅಪ್ಡೇಟ್ ಪ್ರಕಾರ ಸಿನಿಮಾ 2025ರ ಸೆಕೆಂಡ್ ಹಾಫ್ನಲ್ಲಿ ರಿಲೀಸ್ ಆಗಲಿದೆ. ಈಗಾಗ್ಲೇ ಯಶ್ ಸಿನಿಮಾದ ಗ್ಲೋಬಲ್ ರಿಲೀಸ್ಗೂ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಲಿವುಡ್ನ 20th ಸೆಂಚ್ಯರಿ ಫಾಕ್ಸ್ ಸಂಸ್ಥೆ ಜೊತೆಗೆ ಮಾತುಕತೆ ನಡೀತಾ ಇದ್ದು ಟಾಕ್ಸಿಕ್ ಇಂಗ್ಲೀಶ್ ವರ್ಷನ್ನ ವರ್ಲ್ಡ್ ವೈಡ್ ರಿಲೀಸ್ ಮಾಡಲಿಕ್ಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ.
ಅಸಲಿಗೆ ಟಾಕ್ಸಿಕ್ ಸಿನಿಮಾ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಶ್ನಲ್ಲೂ ರೆಡಿಯಾಗ್ತಾ ಇದೆ. ಇಂಡಿಯನ್ ಲಾಂಗ್ವೇಜ್ಗಳ ಒಂದು ವರ್ಷನ್ ಜೊತೆಗೆ ಇಂಗ್ಲೀಶ್ ವರ್ಷನ್ ಪ್ರತ್ಯೇಕವಾಗಿ ಚಿತ್ರೀಕರಣ ಆಗ್ತಾ ಇದೆ. ಕೆಜಿಎಫ್ನಿಂದ ಸಿಕ್ಕಿರೋ ಗ್ಲೋಬಲ್ ಮನ್ನಣೆಯನ್ನ ಬಳಸಿಕೊಂಡು ಇಡೀ ವಿಶ್ವಕ್ಕೆ ಟಾಕ್ಸಿಕ್ ತಲುಪಿಸಬೇಕು ಅನ್ನೋದು ಯಶ್ ಮಾಸ್ಟರ್ ಪ್ಲ್ಯಾನ್. ಯಶ್ರ ಈ ಐಡಿಯಾಗೆ ಹಾಲಿವುಡ್ ಸ್ಟುಡಿಯೋ ಕೂಡ ಪಾಸಿಟಿವ್ ಆಗಿ ಸ್ಪಂದಿಸಿದ್ದು, ಒಂದು ದೊಡ್ಡ ಪ್ಲ್ಯಾನ್ ವರ್ಕೌಟ್ ಮಾಡಲಾಗ್ತಾ ಇದೆ. ಒಟ್ಟಾರೆ ಕೆಜಿಎಫ್ ಬಂದಾಗ ಹೇಗೆ ವಿಶ್ವವೇ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡಿತ್ತೋ ಅದೇ ರೀತಿ ಟಾಕ್ಸಿಕ್ ವಿಶ್ವವನ್ನೇ ಗೆಲ್ಲೋ ಗುರಿ ಇಟ್ಟುಕೊಂಡಿದೆ. ರಾಕಿಯ ಈ ಮಹಾಸಾಹಸದತ್ತ ಎಲ್ಲರ ಕಣ್ಣು ನೆಟ್ಟಿದೆ.