
Vijay Raghavendra's Son: ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್ ರಾಘವೇಂದ್ರ ಪುತ್ರ ಶೌರ್ಯ?
ಸ್ಯಾಂಡಲ್ವುಡ್ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮುದ್ದಿನ ಮಗ ಶೌರ್ಯ ಈಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋ ತಯಾರಿಯಲ್ಲಿ ಇದ್ದಹಾಗೆ ಕಾಣುತ್ತಿದೆ.
ಶೌರ್ಯ ವಿಜಯ್ ರಾಘವೇಂದ್ರ ಜಿಮ್ನಲ್ಲಿ ತನ್ನ ದೇಹವನ್ನ ಹುರಿಗೊಳಿಸುತ್ತಿದ್ದಾರೆ. ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಟ ವಿಜಯ್ ರಾಘವೇಂದ್ರ ಕೂಡ ಮಗನ ಶ್ರಮವನ್ನ ಮೆಚ್ಚಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ.