ಮರೆತೆಯಾ ಅಂಬಿ ಋಣ? ದರ್ಶನ್‌ಗೆ ಫ್ಯಾನ್ಸ್ ಛೀಮಾರಿ; ಫುಲ್ ವಿಡಿಯೋ ನೋಡಿ
ಬೆಂಗಳೂರಿನಲ್ಲೇ ಇದ್ರೂ ನಾಮಕರಣಕ್ಕೆ ಬಾರದ ದರ್ಶನ್. ಮಗುವಿನ ಮುಖ ನೋಡದಷ್ಟು ದ್ವೇಷನಾ. ಇದು ಸರಿಯಾ. ತಂದೆಯಿಲ್ಲದ ದರ್ಶನ್‌ಗೆ ಗಾಡ್ಫಾದರ್ ಆಗಿದ್ದು ಅಂಬರೀಶ್.
ಅಂಬರೀಶ್ ಮೊಮ್ಮಗುವಿನ ನಾಮಕರಣಕ್ಕೆ ದರ್ಶನ್ ಗೈರು ಹಾಜರಾಗಿದ್ದು ಅಭಿಮಾನಿಗಳಿಗೆ ದೊಡ್ಡ ಶಾಕ್ ತಂದಿದೆ. ಖುದ್ದು ದರ್ಶನ್ ಅಭಿಮಾನಿಗಳಿಗೂ ದಾಸನ ಈ ನಡೆ ಅಚ್ಚರಿ ತಂದಿದೆ. ಅಂಬಿರೀಶ್ ಅಭಿಮಾನಿಗಳಂತೂ ಅಂಬಿ ಋಣ ಮರೆತೆಯಾ ಅಂತ ಛೀಮಾರಿ ಹಾಕ್ತಾ ಇದ್ದಾರೆ. ಏನೇ ಅಸಮಾಧಾನ ಇದ್ರೂ ದರ್ಶನ್ ಮಾಡಿದ್ದು ಸರಿಯಿಲ್ಲ ಅಂತಿದ್ದಾರೆ ಅಭಿಮಾನಿಗಳು.ತಾನು ಕೊಲೆ ಆರೋಪ ಹೊತ್ತು ಜೈಲು ಸೇರಿದ ಮೇಲೆ ಸುಮಲತಾ ಬರಲಿಲ್ಲ. ತನ್ನ ಕಷ್ಟಕ್ಕೆ ಸ್ಪಂದಿಸಲಿಲ್ಲ ಅಂತ ದರ್ಶನ್‌ಗೆ ಸಿಟ್ಟಿದೆ ಎನ್ನಲಾಗ್ತಾ ಇದೆ. ಆದ್ರೆ ಅದೇನೇ ಕೋಪ, ಸಿಟ್ಟು , ಸೆಡವು ಇದ್ರೂ ಅಂಬರೀಶ್ ಮಾಮನ ಋಣಕ್ಕಾಗಿ ದರ್ಶನ್ ಹೋಗಬೇಕಿತ್ತು ಅಂತಿದ್ದಾರೆ ದರ್ಶನ್ ಫ್ಯಾನ್ಸ್.