Asianet Suvarna News Asianet Suvarna News

ಅಂತಿಂಥಾ ರೋಮಿಯೋ ಅಲ್ಲವೇ ಅಲ್ಲ! ವ್ಹೀಲ್ ಚೇರ್ನಲ್ಲೇ ಕೂತು ಪ್ರೀತಿಯಲ್ಲಿ ಬೀಳಿಸ್ತಾನೆ!

ಕಳೆದ 15 ವರ್ಷಗಳಿಂದ ಸಹ ನಿರ್ದೇಶಕ, ಸಂಭಾಷಣೆಗಾರನಾಗಿ ಕೆಲಸ ಮಾಡಿರುವವರು ಜಿ. ನಟರಾಜ್. ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 

ಒಬ್ಬ ನಾಯಕ ನಟ ಬೆಳ್ಳಿತೆರೆ ಮೇಲೆ ಬಿಗ್ ಸ್ಟಾರ್ ಆಗಬೇಕು ಅಂದ್ರೆ ಮೊದಲು ಆಯ್ಕೆ ಮಾಡಿಕೊಳ್ಳೋ ಪಾತ್ರ ಮಾಸ್ ಅಥವಾ ಲವರ್ ಕ್ಯಾರೆಕ್ಟರನ್ನ. ಆದ್ರೆ ಇಲ್ಲೊಬ್ಬ ಯಂಗ್ ಟ್ಯಾಲೆಂಟೆಡ್ ಹೀರೋ ತನ್ನ ಮೊದಲ ಸಿನಿಮಾದಲ್ಲಿ ಹ್ಯಾಂಡಿಕ್ಯಾಪ್ಟ್ ಆಗಿದ್ದು, ವೀಲ್ಚೇರ್ ಮೇಲೆ ಕುಳಿತು ರೋಮಿಯೋ ಆಗಿ ಅಭಿನಯಿಸಿ ಬಿಗ್ ಸ್ಟಾರ್ ಆಗೋ ಕನಸು ಕಟ್ಟಿಕೊಂಡಿದ್ದಾರೆ. ಅವರೇ ವೀಲ್ ಚೇರ್ ರೋಮಿಯೋ ರಾಮ್‌ಚೇತನ್.

ಕಳೆದ 15 ವರ್ಷಗಳಿಂದ ಸಹ ನಿರ್ದೇಶಕ, ಸಂಭಾಷಣೆಗಾರನಾಗಿ ಕೆಲಸ ಮಾಡಿರುವವರು ಜಿ. ನಟರಾಜ್. ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಕಲಚೇತನ ಹುಡುಗನೊಬ್ಬನ್ನ ಪ್ರೀತಿ ಕಾಮದ ಕಾಮನೆಗಳ ಸುತ್ತ ಈ ಸಿನಿಮಾದ ಕತೆ ಹೆಣೆಯಲಾಗಿದೆ. ನಡೆಯೋಕು ಆಗದೇ ಇರೋ ಹುಡುಗ ಮದುವೆ ಆಗಬೇಕು ಅಂತ ಆಸೆ ಪಟ್ಟಾಗ ಮಗನ ಆಸೆ ಪೂರೈಸಲು ಆ ಹುಡುಗನ ತಂದೆ ಏನೆಲ್ಲಾ ಪ್ರಯತ್ನ ಮಾಡ್ತಾರೆ ಅನ್ನೋದೇ  ಸಿನಿಮಾದ ಕಥೆ. ಕಾಮಿಡಿಯ ಜೊತೆಗೆ ಎಮೋಷನ್ಸ್ ಬೆರೆಸಿ ಚಿತ್ರ ನಿರ್ಮಾಣ ಆಗಿದೆ. 

ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ರಾಮ್‌ಚೇತನ್ ಗೆ ನಾಯಕಿಯಾಗಿ ನಟಿ ಮಯೂರಿ ಅಭಿನಯಿಸಿದ್ದಾರೆ. ಕಣ್ಣಿಲ್ಲದ ವೇಶ್ಯೆಯ ಪಾತ್ರ ಮಯ್ಯೂರಿಯದ್ದು, ಇನ್ನು ರಂಗಾಯಣ ರಘು ಪಾತ್ರ ಸಿನಿಮಾದಲ್ಲಿ ಮತ್ತೊಂದು ಹೈಲೆಟ್. ಸುಚೇಂದ್ರ ಪ್ರಸಾದ್ ನಾಯಕನ ತಂದೆ ರೋಲ್ ಮಾಡಿದ್ದಾರೆ. ತಬಲ ನಾಣಿ ಕೂಡ ಚಿತ್ರದಲ್ಲಿದೆ. ಗಾಲಿ ಕುರ್ಚಿ ಮೇಲೆ ಇರುವ ಹೀರೋ ಇಟ್ಟುಕೊಂಡು ನಿರ್ದೇಶಕರು ಪ್ರೇಮಕಥೆ ಹೆಣೆದಿದ್ದು, ದೈಹಿಕ ಅಂಗವಿಕಲತೆಗಿಂತ ಮಾನಸಿಕ ಅಂಗವಿಕಲತೆ ನಮ್ಮಲ್ಲಿ ತುಂಬಾ ಇದೆ ಅನ್ನೋದನ್ನ ತೋರಿಸೋಕೆ ಹೊರಟಿದ್ದಾರೆ. ಟ್ರಾವೆಲ್ ಕಂಪನಿ ಮಾಲೀಕರಾದ ವೆಂಕಟಾಚಲಯ್ಯ, ಭಾರತಿ ವೆಂಕಟೇಶ್ ಬಂಡವಾಳ ಹೂಡಿರೋ ವೀಲ್ ಚೇರ್ ರೋಮೊಯೋ ಸಿನಿಮಾ ಮೇ 27ಕ್ಕೆ ರಾಜ್ಯಾದ್ಯಂತ ಬೆಳ್ಳಿತೆರೆ ಮೇಲೆ ಬರಲಿದೆ.