ಸದ್ಯ ಬೇಲ್ ಮೇಲೆ ಜೈಲ್ ಹೊರಗಿರುವ ದರ್ಶನ್ ಮುಂದಿನ ಕಥೆ ಏನು? ವಿಡಿಯೋದಲ್ಲೇನೋ ಇದೆ ನೋಡಿ!
ಕಳೆದ ವರ್ಷದ ಕೊನೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್ಗೆ...
ಕಳೆದ ವರ್ಷದ ಕೊನೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್ಗೆ ಆ ಬಳಿಕ ಬೆನ್ನು ಬಿದ್ದಿದ್ದೆಲ್ಲಾ ಬರೀ ವಿವಾದಗಳೇ. ಅದ್ರಲ್ಲೂ ವರ್ಷಾಂತ್ಯದ ವೇಳೆ ದರ್ಶನ್ ಜೈಲಿನಲ್ಲಿ ಕೊಳೆಯುವ ಸ್ಥಿತಿ ಬಂದಿದೆ. 2024ರಲ್ಲಿ ಶುಭಾರಂಭ ಮಾಡಿದ್ದ ದಾಸನಿಗೆ ವರ್ಷಾಂತ್ಯದ ಹೊತ್ತಿಗೆ ವೃತ್ತಿ ಬದುಕೇ ಅಂತ್ಯವಾಗುವಂತೆ ಆಗಿದೆ.
ಕಳೆದ ಜೂನ್ನಲ್ಲಿ ದರ್ಶನ್ ಮರ್ಡರ್ ಕೇಸ್ನಲ್ಲಿ ಅರೆಸ್ಟ್ ಆದ್ರು. ಗೆಳತಿ ಪವಿತ್ರಾಗೆ ಅಶ್ಲೀಲ ಮೆಸೆಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನ ಹೆದರಿಸೋಕೆ ಹೋಗಿ ಪ್ರಾಣವನ್ನೇ ತೆಗೆದಿದ್ದ ದರ್ಶನ್, ಈ ಕೇಸ್ ಮುಚ್ಚಿಹಾಕೋಕೆ ಮೂವರನ್ನ ಹಣ ಕೊಟ್ಟು ಸರೆಂಡರ್ ಮಾಡಿಸಿದ್ರು. ಆದ್ರೆ ಖಾಕಿಪಡೆ ಇದರ ಹಿಂದಿನ ಅಸಲೀಯತ್ತನ್ನ ಹೊರತೆಗೆದು ದರ್ಶನ್ನ ಬಂಧಿಸಿ ಜೈಲಿಗಟ್ಟಿತ್ತು.
ಸದ್ಯ ಮೆಡಿಕಲ್ ಬೇಲ್ ಮೇಲೆ ಆಸ್ಪತ್ರೆಯಲ್ಲಿರೋ ದಾಸ ಇನ್ನೆರಡು ವಾರದಲ್ಲಿ ಜೈಲಿಗೆ ಮರಳಬೇಕಿದೆ. ಒಟ್ಟಾರೆ ಖುಷಿ ಖುಷಿಯಿಂದ ವರ್ಷಾರಂಭ ಮಾಡಿದ್ದ ದರ್ಶನ್ಗೆ ವರ್ಷಾಂತ್ಯ ಮಾತ್ರ ದುರಂತಮಯವಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..