)
ಕರಾವಳಿಯ ಪ್ರೇಮಕಥೆ 'ಮಾರ್ನಮಿ'ಯಲ್ಲಿ ರಿತ್ವಿಕ್-ಚೈತ್ರಾ ಕಮಾಲ್! ರಾಮ್‌ಚರಣ್ ಸಿನಿಮಾ ಸೆಟ್‌ನಲ್ಲಿ ಅವಗಢ
ಹೈದರಾಬಾದ್‌ನಲ್ಲಿ ರಾಮ್ ಚರಣ್ ನಿರ್ಮಾಣದ ಚಿತ್ರ 'ದಿ ಇಂಡಿಯಾ ಹೌಸ್' ಸೆಟ್‌ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಸೆಟ್ ನೀರಿನ ಟ್ಯಾಂಕ್ ಒಡೆದು ಪ್ರವಾಹ ಉಂಟಾಗಿದೆ.
ಹೈದರಾಬಾದ್‌ನಲ್ಲಿ ರಾಮ್ ಚರಣ್ ನಿರ್ಮಾಣದ ಚಿತ್ರ 'ದಿ ಇಂಡಿಯಾ ಹೌಸ್' ಸೆಟ್‌ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಸೆಟ್ ನೀರಿನ ಟ್ಯಾಂಕ್ ಒಡೆದು ಪ್ರವಾಹ ಉಂಟಾಗಿದೆ. ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಲೀಟರ್ ನೀರು ಶೂಟಿಂಗ್ ಮಹಡಿಯಾದ್ಯಂತ ಹರಿದಿದೆ. ಈ ಅಪಘಾತದಿಂದಾಗಿ ಸೆಟ್‌ಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ ಚಿತ್ರೀಕರಣ ಉಪಕರಣಗಳಿಗೆ ಹಾನಿಯಾಗಿದೆ. ಸಹಾಯಕ ಛಾಯಾಗ್ರಾಹಕ ಸೇರಿದಂತೆ ಅನೇಕರಿಗೆ ಗಂಭೀರ ಗಾಯಗಳು ಕೂಡ ಆಗಿವೆ.
'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ಇದೀಗ ರಿತ್ವಿಕ್ ಮಾರ್ನಮಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ರಿತ್ವಿಕ್ ಮಠದ್ ಹುಟ್ಟುಹಬ್ಬಕ್ಕೆ ಮಾರ್ನಮಿ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಟೀಸರ್ ಹೈಲೆಟ್ಸ್.. ನಟ ರಿಷಿ, ನಿರ್ದೇಶಕ ಸಿಂಪಲ್ ಸುನಿ, ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ದಿವ್ಯ ಉರುಡುಗ ಮತ್ತು ಕೆಪಿ ಅರವಿಂದ್ ಸೇರಿ ಟೀಸರ್ ಲಾಂಚ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿತ್ವಿಕ್ಗೆ ನಾಯಕಿಯಾಗಿ ಸ್ಟಾರ್ ನಟಿ ಚೈತ್ರಾ ಜೆ ಆಚಾರ್ ಬಣ್ಣ ಹಚ್ಚಿದ್ದಾರೆ. ಮಾರ್ನಮಿಗೆ ನಿಶಾಂತ್ ಬಂಡವಾಳ ಹೂಡಿದ್ದು, ರಿಶಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.