Gandhada Gudi ಗಂಧದ ಗುಡಿ ನೋಡಿದರೆ ಚಿಕ್ಕಪ್ಪ ಜೊತೆಯಲ್ಲಿಯೇ ಇದ್ದಾರೆ ಅನಿಸುತ್ತೆ

ಗಂಧದ ಗುಡಿ ಸಿನಿಮಾವನ್ನು ಪ್ರತಿಯೊಬ್ಬರು ಚಿತ್ರ ಮಂದಿರಕ್ಕೆ ಬಂದು ನೋಡಬೇಕೆಂದು ವಿನಯ್ ರಾಜ್‌ಕುಮಾರ್ ಹೇಳಿದರು.

First Published Oct 28, 2022, 11:46 AM IST | Last Updated Oct 28, 2022, 12:48 PM IST

ಗಂಧದ ಗುಡಿ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ವಿನಯ್, ನನ್ನ ಚಿಕ್ಕಪ್ಪನ ಸಿನಿಮಾ ಎಂದು ನಾನು ಹೇಳ್ತಾ ಇಲ್ಲ. ಸಿನಿಮಾದಲ್ಲಿ ಇರುವ ಜರ್ನಿಯನ್ನು ಎಲ್ಲರೂ ನೋಡಿದರೆ ತುಂಬಾ ಸಂತೋಷವಾಗುತ್ತದೆ.  ಇಲ್ಲಿ ನಿಮಗೆ ಸಾಕಷ್ಟು ಪ್ರೀತಿ ಸಿಗುತ್ತದೆ ಎಂದರು. ಒಬ್ಬ ಮನುಷ್ಯ ಹೇಗಿರಬೇಕು ಎನ್ನುವ ಮೌಲ್ಯವನ್ನು ಸಿನಿಮಾದಲ್ಲಿ ಹೇಳಿದ್ದಾರೆ. ಚಿಕ್ಕಪ್ಪರನ್ನು ಸಿನಿಮಾದಲ್ಲಿ ನೋಡಿದರೆ ನಮ್ಮ ಜೊತೆಯಲ್ಲಿ ಇದ್ದಾರೆ, ಹತ್ತಿರನೇ ಇದ್ದಾರೆ ಎಂದು ಅನಿಸುತ್ತಿದೆ. ಎಲ್ಲರೂ ಈ ಸಿನಿಮಾವನ್ನು ನೋಡಿ, ನಮ್ಮ ನಾಡಿನ ಕಾಡು ನಮಗೆ ಎಷ್ಟು ಮುಖ್ಯ ಎಂದು ಈ ಸಿನಿಮಾ ಹೇಳುತ್ತದೆ ಎಂದರು.

 ಹಬ್ಬ ಮುಗೀತು..ಹೊಟ್ಟೆ ಕೆಡ್ತು..ಸರಿ ಮಾಡ್ಕೊಳ್ಳೋದು ಹೇಗೆ ?