Asianet Suvarna News Asianet Suvarna News

ವಿಜಯ್ ರಾಘವೇಂದ್ರ ನಟನೆಯ ಕ್ರೈಂ ಥ್ರಿಲ್ಲರ್ 'ಕೇಸ್ ಆಫ್ ಕೊಂಡಾಣ' ಸಿನಿಮಾ ಟ್ರೈಲರ್ ರಿಲೀಸ್

ವಿಜಯ್ ರಾಘವೇಂದ್ರ ನಟನೆಯ ಕ್ರೈಂ ಥ್ರಿಲ್ಲರ್ ಸ್ಟೋರಿಯ ಕೇಸ್ ಆಫ್ ಕೊಂಡಾಣ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಮೂರು ಕಥೆಗಳೊಂದಿಗೆ ಶುರುವಾಗುತ್ತೆ. ಆ ಸ್ಟೋರಿಯ ಇನ್ವೆಸ್ಟಿಗೇಷನ್ ಮಾಡೋಡೋ ಕೇಸ್ ಆಫ್ ಕೊಂಡಾಣ ಸಿನಿಮಾದ ಸ್ಟೋರಿ. 
 

ವಿಜಯ್ ರಾಘವೇಂದ್ರ ನಟನೆಯ ಕ್ರೈಂ ಥ್ರಿಲ್ಲರ್ ಸ್ಟೋರಿಯ ಕೇಸ್ ಆಫ್ ಕೊಂಡಾಣ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಮೂರು ಕಥೆಗಳೊಂದಿಗೆ ಶುರುವಾಗುತ್ತೆ. ಆ ಸ್ಟೋರಿಯ ಇನ್ವೆಸ್ಟಿಗೇಷನ್ ಮಾಡೋಡೋ ಕೇಸ್ ಆಫ್ ಕೊಂಡಾಣ ಸಿನಿಮಾದ ಸ್ಟೋರಿ. ಚಿತ್ರದ ಎಂಭತ್ತರಷ್ಟು ಭಾಗವನ್ನು ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಸಿನಿಮಾ ಇದು. ಈ ಸಿನಿಮಾಗೆ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ನಟ ವಿಜಯ್ ರಾಘವೇಂದ್ರ ಅವರು ಹಿಂದೆಂದೂ ಕಂಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಭಾವನಾ ಮೆನನ್ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ದೇವಿಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ಬರೆದು ನಿರ್ಮಾಣ ಮಾಡಿದ್ದಾರೆ. ಖುಷಿ ರವಿ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಸಾಹಿತಿ ಹಿರಿಯ ಪತ್ರಕರ್ತ ಜೋಗಿ ಅವರು ಸಂಭಾಷಣೆ ಬರೆದಿದ್ದಾರೆ. ಜನವರಿ 26 ರಂದು ಕೇಸ್ ಆಫ್ ಕೊಂಡಾಣ ಸಿನಿಮಾ ತೆರೆಕಾಣಲಿದೆ.