Wedding Rumor: ರಶ್ಮಿಕಾ ಜೊತೆ ಮದುವೆ ಗಾಸಿಪ್, ಮೌನ ಮುರಿದ ವಿಜಯ್ ದೇವರಕೊಂಡ

ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಈ ವರ್ಷ ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಶ್ಮಿಕಾ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಈ ವರ್ಷ ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಶ್ಮಿಕಾ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.

'ನಮ್ಮಿಬ್ಬರ ನಡುವೆ ಏನೂ ಇಲ್ಲ. ನಾವು ಫ್ರೆಂಡ್ಸ್' ಎಂದು ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಂದಿನಿಂದ ಈ ಜೋಡಿಯ ಅಭಿಮಾನಿಗಳು ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಮುಂಬೈನಲ್ಲಿ ಲಿಗರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಟಿ ಅನನ್ಯಾ ಪಾಂಡೆ ಕೂಡ ನಟಿಸಿರುವ ಪುರಿ ಜಗನ್ನಾಥ್ ಅವರ ಈ ಚಿತ್ರವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದರು ಇಬ್ಬರು ಆಗಾಗ್ಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, 

Related Video