ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!
‘ಗೀತಾ ಗೋವಿಂದ’ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಲಿಪ್ಲಾಕ್ ಸೀನ್, ಅಲ್ಲಿಂದಾನೇ ಶುರುವಾಗಿತ್ತು ನೋಡಿ ಇವರಿಬ್ಬರ ಪ್ರೇಮ್ ಕಹಾನಿ. ಆ ನಂತರ ಇದೇ ಜೋಡಿ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ನಟಿಸಿತ್ತು. ಅಲ್ಲೂ ಇವರಿಬ್ಬರ ಕಿಸ್ಸಿಂಗ್ ಸೀನ್ ನೋಡಿ ಅಭಿಮಾನಿಗಳು, ಇಲ್ಲಿ ಸಂಥಿಂಗ್.. ಸಂಥಿಂಗ್ ಇದೆ ಅಂತಾ ಹೇಳಿದ್ರು. ಆದ್ರೂ ಇವರಿಬ್ಬರೂ ಮಾತ್ರ ಎಲ್ಲೆಲ್ಲೂ ಒಪನ್ ಆಗಿ ಒಪ್ಕೊಂಡಿರ್ಲಿಲ್ಲ. ಆದರೆ ಈಗ ಇವರಿಬ್ಬರ ಪ್ರೇಮ್ ಕಹಾನಿ ಗುಟ್ಟು ರಟ್ಟು ಮಾಡಿದ್ದಾರೆ ನಟ ನಂದಮೂರಿ ಬಾಲಕೃಷ್ಣ.
ನಟ ನಂದಮೂರಿ ಬಾಲಕೃಷ್ಣ, ನಿರೂಪಕರಾಗಿ ತೆಲುಗಿನಲ್ಲಿ ‘ಅನ್‌ಸ್ಟಾಪಬಲ್-2’ ಶೋ(Unstoppable-2 Show) ನಡೆಸಿಕೊಡುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ‘ಅನಿಮಲ್’ ಚಿತ್ರತಂಡ ಭಾಗಿಯಾಗಿತ್ತು. ನಟಿ ರಶ್ಮಿಕಾ ಮಂದಣ್ಣ(Rashmika) ಹಾಗೂ ನಟ ರಣಬೀರ್ ಕಪೂರ್(Ranbir kapoor) ಈ ಕಾರ್ಯಕ್ರಮದ ಸ್ಪೆಷಲ್ ಗೆಸ್ಟ್‌ಗಳಾಗಿದ್ದರು. ನಟ ನಂದಮೂರಿ ಬಾಲಕೃಷ್ಣ ಮಾತನಾಡ್ತಾ, ಗುಲಾಬಿ ಹೂವು ಕೊಟ್ಟು ರಶ್ಮಿಕಾಗೆ ಪ್ರಪೋಸ್ ಮಾಡಿದ್ದಾರೆ. ಅಷ್ಟೆ ಅಲ್ಲ ಆಕೆಯ ಫೋನ್ನಿಂದಾನೇ ವಿಜಯ್ ದೇವರಕೊಂಡಗೆ ಕಾಲ್ ಮಾಡಿಸಿದ್ದಾರೆ. ವಿಜಯ್(Vijay Deverakonda) ರಶ್ಮಿಕಾ ಕಾಲ್ಗೆ ‘ವಾಟ್ಸಪ್ರೇ’ ಎಂದು ಹೇಳುತ್ತಾರೆ. ಆಗ ರಶ್ಮಿಕಾ ಏನ್ ಹೇಳ್ಬೇಕು ಅನ್ನೊದು ಗೊತ್ತಾಗ್ದೆ ಪೇಚಾಡ್ತಿದ್ರು. ಇದೇ ಕಾರ್ಯಕ್ರಮದಲ್ಲಿ, ನಟಿ ರಶ್ಮಿಕಾಗೆ ಅನಿಮಲ್ ಹಾಗೂ ಅರ್ಜುನ್ ರೆಡ್ಡಿ ಚಿತ್ರಗಳ ಪೋಸ್ಟರ್ ತೋರಿಸಿ ಇದರಲ್ಲಿ ಯಾವುದು ಬೆಸ್ಟ್ ಎಂದು ನಂದಮೂರಿ ಬಾಲಕೃಷ್ಣ ಎಂದು ಕೇಳಿದ್ಧಾರೆ. ಹೀಗೆ ಕಾಲೆಳೆಯೋದಕ್ಕೆ ನಟ ರಣಬೀರ್ ಕಪೂರ್ ಕೂಡ ಸಾಥ್ ಕೊಟ್ಟಿದ್ದಾರೆ. ಆ ಒಂದು ಫನ್ನಿ ಮೂಮೆಂಟ್ನ್ನ ಅಲ್ಲಿದ್ದ ವೀಕ್ಷಕರೆಲ್ಲ ಎಂಜಾಯ್ ಮಾಡಿದ್ದಾರೆ. ಕೊನೆಗೆ ಡೈರೆಕ್ಟರ್ ಸಂದೀಪ್ ರೆಡ್ಡಿ ಜೊತೆ ವಿಜಯ್ದೇವರಕೊಂಡ ಮಾತನಾಡ್ತಿರುವಾಗ, ಬಾಲಯ್ಯ ‘ನಿಮ್ಮ ಹಿರೋಗೆ ಹೇಳಪ್ಪ ಐ ಲವ್ ರಶ್ಮಿಕಾ’ ಎಂದು ಹೇಳಿ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಂಭಾಷಣೆ ಈಗ ಮತ್ತೆ ಇವರಿಬ್ಬರ ಪ್ರೇಮ್ಕಹಾನಿಗೆ ಸಾಕ್ಷಿ ಸಿಕ್ಕಂತಾಗಿದೆ.
ಇದನ್ನೂ ವೀಕ್ಷಿಸಿ: ತೋಳು ತಟ್ಟಿ ನಾನಾ ನೀನಾ ಎಂದ ತ್ರಿಬಲ್ ಸ್ಟಾರ್ಸ್ ! ಅಭಿಷೇಕ್, ಕೃಷ್ಣ, ರಾಜ್ ಬಿ ಶೆಟ್ಟಿ ಮಧ್ಯೆ ಮೆಗಾ ಫೈಟ್!