Actor Ashwath Narayan: ಅಶ್ವಥ್ ನಾರಾಯಣ್ ದಂಪತಿ ಜೀವನಕ್ಕೆ ಆಸರೆಯಾದ ಸುವರ್ಣ ನ್ಯೂಸ್

ಮಕ್ಕಳೇ ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್‌ನ ಹಿರಿಯ ನಟ ಅಶ್ವತ್ಥ್ ನಾರಾಯಣ್ ಬುಧವಾರ (ಡಿ.15) ಪೊಲೀಸರಿಗೆ ದೂರು ಕೊಟ್ಟಿದ್ದರು. ಸರಿಯಾಗಿ ಊಟ ತಿಂಡಿಯೂ ಕೊಡುತ್ತಿಲ್ಲ. ಪಕ್ಕದ ಮನೆಯವರ ಸಹಾಯ ಕೇಳಿದರೆ ಅವರ ಜೊತೆಗೂ ಗಲಾಟೆ ಮಾಡುತ್ತಾರೆ.

Share this Video
  • FB
  • Linkdin
  • Whatsapp

ಮಕ್ಕಳೇ ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್‌ನ (Sandalwood) ಹಿರಿಯ ನಟ ಅಶ್ವತ್ಥ್ ನಾರಾಯಣ್ (Ashwath Narayan) ಬುಧವಾರ (ಡಿ.15) ಪೊಲೀಸರಿಗೆ ದೂರು ಕೊಟ್ಟಿದ್ದರು. ಸರಿಯಾಗಿ ಊಟ ತಿಂಡಿಯೂ ಕೊಡುತ್ತಿಲ್ಲ. ಪಕ್ಕದ ಮನೆಯವರ ಸಹಾಯ ಕೇಳಿದರೆ ಅವರ ಜೊತೆಗೂ ಗಲಾಟೆ ಮಾಡುತ್ತಾರೆ. ಮಗ ಉದಯ್ ಹಾಗೂ ಮಗಳು ವಸುಂಧರಾ ನನಗೆ ಕಾಟ ಕೊಡುತ್ತಿದ್ದಾರೆ. 'ಹೆಂಡತಿಯ ಹೆಸರಲ್ಲಿ ಇದ್ದ ಜಾಗದಲ್ಲಿ ತಾನು ಮೂರು ಅಂತಸ್ಥಿನ ಮನೆ ಕಟ್ಟಿದ್ದೆ. ಆ ಮನೆಯನ್ನು ದಾನ ಪತ್ರ ಅಂತ ಮಾಡಿಸಿಕೊಂಡಿದ್ದಾರೆ. 

ಹಿರಿಯ ನಟನಿಗೆ ಮಕ್ಕಳೇ ವಿಲನ್, ಮನಕಲಕುತ್ತದೆ ಕಣ್ಣೀರ ಕಹಾನಿ

ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಳೆದ ಗುರುವಾರ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಹೀಗಾಗಿ ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದು ಅಶ್ವತ್ಥ್ ನಾರಾಯಣ್ ಸಹಾಯ ಕೋರಿದ್ದರು. ಈ ವರದಿಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ ವರದಿ ಮಾಡಿತ್ತು. ಈ ವರದಿ ಪ್ರಸಾರದ ಬಳಿಕ ಇಳಿವಯಸ್ಸಿನಲ್ಲಿ ಸಂಕಷ್ಟದಲ್ಲಿದ್ದ ಹಿರಿಯ ನಟ ಅಶ್ವತ್ಥ್ ನಾರಾಯಣ್ ಹಾಗೂ ಅವರ ಪತ್ನಿ ಇಬ್ಬರಿಗೂ ವೃದ್ಧಾಶ್ರಮದಲ್ಲಿ (Old age Home) ಆಶ್ರಯ ಸಿಕ್ಕಿದೆ. ಗಂಗೋಡನಹಳ್ಳಿಯ ಶ್ರೀ ಸಾಯಿಬಾಬಾ ಆಶ್ರಮದಲ್ಲಿ ದಂಪತಿಗಳಿಗೆ ವಾಸ್ತವ್ಯದ ವ್ಯವಸ್ಥೆಯಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video