ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ನಟ ಉಪೇಂದ್ರ ರೆಬಲ್; ಕಾರಣ ಏನು?
9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿರೋ ಸಿನಿಮಾ.ಡಿಸೆಂಬರ್ 20ಕ್ಕೆ ವರ್ಲ್ಡ್ ವೈಡ್ ಉಪ್ಪಿ ರೂಲ್ ಸ್ಟಾರ್ಟ್.
ಎಲ್ಲರೂ ಟ್ರೈಲರ್ ಬಿಟ್ರೆ ನಾನು ವಾರ್ನರ್ ಬಿಡ್ತಿನಿ ಎಂದಿದ್ದು ರಿಯಲ್ ಸ್ಟಾರ್, ಈಗ ಈ ಟ್ರೈಲರ್ ಕಂ ವಾರ್ನರ್ ಝಲಕ್ ನೋಡಿದ್ದಾರೆ. UI ವಾರ್ನರ್ ನೋಡಿದ ಫ್ಯಾನ್ಸ್ ಉಪ್ಪಿ ಈಸ್ ಬ್ಯಾಕ್ ಅಂತಿದ್ದಾರೆ. ಒನ್ಸ್ ಅಗೈನ್ ಸೊಸೈಟಿ ಕುರಿತ ವಿಡಂಬನೆಯ ಕಥೆ ಹೇಳ್ತಿರೋ ಉಪ್ಪಿ, ಟೈಮ್ ಟ್ರಾವೆಲ್ ಮಾಡ್ಸಿ ಹೊಸ ಅನುಭವ ನೀಡುವ ಸೂಚನೆ ಕೊಟ್ಟಿದ್ದಾರೆ.ಸದ್ಯ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನ್ಲಿ UI ವಾರ್ನರ್ ಹೆಸರಿನ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲೆಡೆ ಟ್ರೆಂಡಿಂಗ್ನಲ್ಲಿದೆ. ವೇಣು ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾಗಿದೆ. ಗುರುಪ್ರಸಾದ್ ಌಂಡ್ ಸಾಧುಕೋಕಿಲ ಟ್ರೈಲರ್ನಲ್ಲಿ ಹೈಲೈಟ್ ಆಗಿದ್ದಾರೆ. ಡಿಸೆಂಬರ್ 20ಕ್ಕೆ UI ವರ್ಲ್ಡ್ ವೈಡ್ ತೆರೆಗೆ ಬರಲಿದ್ದು, ಉಪ್ಪಿ ಮ್ಯಾಜಿಕ್ ಅನಾವರಣ.