Upendra: ರಿಯಲ್ ಸ್ಟಾರ್ ಹೊಸ ಸಿನಿಮಾದ ಪೋಸ್ಟರ್ ಅಸಲಿಯೋ ಅಥವಾ ನಕಲಿಯೋ?

ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯ ಮತ್ತು ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದ ಫಸ್ಟ್‌ಲುಕ್​ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯ ಮತ್ತು ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದ ಫಸ್ಟ್‌ಲುಕ್​ ಪೋಸ್ಟರ್ (Firstlook Poster)​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಕೊಂಬಿನ ಕುದುರೆ ಏರಿ ಬಂದ ಉಪೇಂದ್ರ ಅವರು ತಮ್ಮ ಸಿನಿಮಾದ ಪೋಸ್ಟರ್ ಅನ್ನು ಬೇರೆ ಸಿನಿಮಾದಿಂದ ಎರವಲು ಪಡೆದಿದ್ದಾರಾ ಅಥವಾ ಏನೂ ಗೊತ್ತಿಲ್ಲದೇ ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ತಯಾರು ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನು ಹಲವು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ಪೂರಕ ದಾಖಲೆಯನ್ನು ಅವರೇ ನೀಡಿದ್ದಾರೆ. 

Upendra: ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟ ರಿಯಲ್ ಸ್ಟಾರ್ ಉಪೇಂದ್ರ

ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ ಜೇಮ್ಸ್ ಡಿಮೊನಾಕೋ ಅವರು ಬರೆದು, ನಿರ್ಮಿಸಿದ 'ದಿ ಫಾರೆವರ್ ಪರ್ಜ್' (The Forever Purge) ಸಿನಿಮಾದ ಪೋಸ್ಟರ್‌ಗೂ ಮತ್ತು ಉಪೇಂದ್ರ ಅವರು ಬಿಡುಗಡೆ ಮಾಡಿರುವ ಪೋಸ್ಟರ್‌ಗೂ ಸಾಕಷ್ಟು ಹೋಲಿಕೆ ಕಾಣುತ್ತದೆ. ಹೀಗಾಗಿ ಬಹುತೇಕ ಇದೇ ಸಿನಿಮಾದ ಸ್ಫೂರ್ತಿಯಿಂದಾಗಿ ರಿಯಲ್ ಸ್ಟಾರ್ ತಮ್ಮ ಸಿನಿಮಾದ ಪೋಸ್ಟರ್ ತಯಾರಿಸಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಉಪೇಂದ್ರ ಅವರ ಪೋಸ್ಟರ್ ನಲ್ಲಿ ಗತಿಸಿದ ಇತಿಹಾಸ, ಮಸೀದೆ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ. ನಶಿಸಿದ ನಾಗರೀಕತೆಯ ಕುರುಹುಗಳಿವೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರವಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video