Puttakkana Makkalu: ಧಾರಾವಾಹಿಗೆ ಹಿರಿಯ ನಟಿ ಉಮಾಶ್ರೀ ಸಂಭಾವನೆ ದುಬಾರಿ!

ಬೆಳ್ಳಿತೆರೆಯ ಮೇಲೆ ಅಭೂತಪೂರ್ವ ಪಾತ್ರಗಳಿಂದ ಗಮನ ಸೆಳೆದಿದ್ದ ಹಿರಿಯ ನಟಿ ಉಮಾಶ್ರೀ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಧಾರಾವಾಹಿ ಪ್ರಸಾರ ಆರಂಭಗೊಂಡು ಒಂದು ವಾರ ಪೂರೈಸಿದೆ. 

Share this Video
  • FB
  • Linkdin
  • Whatsapp

ಬೆಳ್ಳಿತೆರೆಯ ಮೇಲೆ ಅಭೂತಪೂರ್ವ ಪಾತ್ರಗಳಿಂದ ಗಮನ ಸೆಳೆದಿದ್ದ ಹಿರಿಯ ನಟಿ ಉಮಾಶ್ರೀ (Umashree) 'ಪುಟ್ಟಕ್ಕನ ಮಕ್ಕಳು' (Puttakaana Makkalu) ಧಾರಾವಾಹಿ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಧಾರಾವಾಹಿ ಪ್ರಸಾರ ಆರಂಭಗೊಂಡು ಒಂದು ವಾರ ಪೂರೈಸಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪ್ರಮುಖ ಆಕರ್ಷಣೆಯೇ ಉಮಾಶ್ರೀ. ಬೆಳ್ಳಿ ತೆರೆಯಲ್ಲಿ ಮಿಂಚಿ ರಾಜಕೀಯಕ್ಕೆ ಧುಮುಕಿದ್ದ ಈ ನಟಿ ಇದೀಗ ಕಿರುತೆರೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. 

ಚಿತ್ರರಂಗಕ್ಕೆ ಜಯಂತಿ ಬಂಗಾರದ ಹೂವು: ನಟಿ ಉಮಾಶ್ರೀ

ಧಾರಾವಾಹಿಯಲ್ಲಿ ನಟಿಸಲು ಉಮಾಶ್ರೀ ಪಡೆಯುತ್ತಿರುವ ವೇತನ ಎಷ್ಟು ಗೊತ್ತಾ? 'ಜೊತೆ ಜೊತೆಯಲಿ' (Jothe Jotheyali) ಖ್ಯಾತಿಯ ನಿರ್ದೇಶಕ ಆರೂರು ಜಗದೀಶ್ (Aroor Jagadish) ಅವರೇ ತಮ್ಮ ಸ್ವಂತ ಬ್ಯಾನರ್‌ನಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕ ಅನಿರುದ್ಧ್‌ಗೆ (Aniruddh) ಅತೀ ಹೆಚ್ಚು ಅಂದರೆ ದಿನವೊಂದಕ್ಕೆ 30 ಸಾವಿರ ರೂ. ಸಂಭಾವನೆ ನೀಡಲಾಗುತ್ತಿತ್ತು. ಆದರೆ ಉಮಾಶ್ರೀ ದಿನವೊಂದಕ್ಕೆ 45 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video