ಕಾಂತಾರ ಸಿನಿಮಾಗೆ ಐವತ್ತು ದಿನದ ಸಂಭ್ರಮ: ಕಡಲ ತೀರದಲ್ಲಿ ಅರಳಿದ ಪಂಜುರ್ಲಿ ಕಲಾಕೃತಿ
ಕಾಂತಾರ ಸಿನಿಮಾ ಐವತ್ತು ದಿನಗಳನ್ನು ಪೂರೈಸಿದ ಹಿನ್ನೆಲೆ ಮಣಿಪಾಲದ ಸ್ಯಾಂಡ್ ಹಾರ್ಟ್'ನ ಕಲಾವಿದರು ಅದ್ಭುತ ಮರಳುಶಿಲ್ಪ ರಚಿಸಿದ್ದಾರೆ.
ಕರಾವಳಿಯ ಕೌತುಕದ ಕತೆ ಹೇಳಿದ ಕಾಂತಾರ ಚಿತ್ರವು ಐವತ್ತು ದಿನ ಪೂರೈಸಿದ್ದು, ಕಾಪುವಿನ ಸ್ಯಾಂಡ್ ಹಾರ್ಟ್ ತಂಡ ಹೃದಯ ತುಂಬಿ ಶುಭ ಹಾರೈಸಿದೆ. ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೇಬೆಟ್ಡು ಎಂಬುವವರು ದಿನವಿಡೀ ಪರಿಶ್ರಮ ಪಟ್ಟು ಕಲಾಕೃತಿಯಲ್ಲಿ ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣವನ್ನು ಮೂಡಿಸಿದ್ದಾರೆ. ಕಾಂತಾರದ ಸಕ್ಸಸ್'ಗೆ ಕೇವಲ ಚಿತ್ರತಂಡ ಮಾತ್ರವಲ್ಲ, ಕರುನಾಡೇ ಹೆಮ್ಮೆಯಿಂದ ಬೀಗುತ್ತಿದೆ. ಕರಾವಳಿ ಭಾಗದ ಸಮುದ್ರ ತೀರದಲ್ಲಿ ರಚಿಸುವ ಮರಳು ಶಿಲ್ಪಗಳಿಗೆ ವಿಶೇಷ ಆಕರ್ಷಣೆಯಿದೆ. ಈ ಮರಳು ಶಿಲ್ಪಗಳನ್ನು ರಚಿಸುವುದು ಸುಲಭದ ಕೆಲಸವಲ್ಲ. ದಿನವಿಡೀ ಶ್ರಮಪಟ್ಟು, ಹಲವು ಗಂಟೆಗಳ ಪರಿಶ್ರಮದ ಅಗತ್ಯವಿದ್ದು, ಜಾರುವ ಗುಣದ ಮರಳಿನ ಕಣಗಳನ್ನು ಜೋಡಿಸಿ ಕಲಾಕೃತಿ ಮೂಡಿಸುವುದೇ ಒಂದು ಸಾಹಸ. ಇಷ್ಟೊಂದು ಕಷ್ಟ ಪಟ್ಟು ತಯಾರಿಸಿದ ಈ ಮರಳು ಶಿಲ್ಪವನ್ನು ಕೆಲವೇ ನಿಮಿಷಗಳ ಕಾಲ ಮಾತ್ರ ನೋಡಬಹುದು. ನಂತರ ಈ ಕಲಾಕೃತಿ ಮರಳುಪಾಲಾಗುತ್ತೆ.
'ಜೆಂಟಲ್ ಬರ್ತ್ ಮೆಥಡ್'ನಿಂದ ನ್ಯಾಚುರಲ್ ಡೆಲಿವರಿ ಆಯಿತು; ಸಹಜ ಹೆರಿಗೆ ಸೀಕ್ರೆಟ್ ರಿವೀಲ್ ಮಾಡಿದ ಸೋನಮ್