Asianet Suvarna News Asianet Suvarna News

ಪುನೀತ್‌ಗೆ ಜೋಡಿಯಾಗಲಿದ್ದಾರೆ ಕಾಲಿವುಡ್ ಚೆಲುವೆ

Aug 4, 2021, 3:06 PM IST

ಬಹುಭಾಷಾ ನಟಿ, ಸೌತ್ ಸುಂದರಿ ಮತ್ತೆ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಸೌತ್‌ನ ಸ್ಟಾರ್ ಹಿರಿಯೋಯಿನ್ ತ್ರಿಷಾ ಕೃಷ್ಣನ್ ಈಗ ಪುನೀತ್‌ ರಾಜ್ ಕುಮಾರ್‌ಗೆ ಜೋಡಿಯಾಗಲಿದ್ದಾರೆ. ದ್ವಿತ್ವ ಸಿನಿಮಾದಲ್ಲಿ ಕಾಲಿವುಡ್‌ನ ಕೃಷ್ಣ ಸುಂದರಿ  ಕಾಣಿಸಿಕೊಳ್ಳಲಿದ್ದಾರೆ.

ಪುನೀತ್ ರಾಜ್‌ಕುಮಾರ್ 'ದ್ವಿತ್ವ' ಚಿತ್ರದಲ್ಲಿ ತ್ರಿಷಾ ಕೃಷ್ಣನ್ ನಾಯಕಿ?

ಪೋಸ್ಟರ್ ಲುಕ್ ಮತ್ತು ಟೈಟಲ್‌ನಿಂದ ಪ್ರಚಾರ ಹಾಗೂ ವಿವಾದ ಸೃಷ್ಟಿಸಿರೋ ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಲು ಸ್ಟಾರ್ ನಟಿಯನ್ನೇ ಕರೆ ತರಲಾಗಿದೆ. ಇದು ಎರಡನೇ ಬಾರಿ ತ್ರಿಷಾ ಪುನೀತ್‌ಗೆ ಜೋಡಿಯಾಗಲಿದ್ದಾರೆ. ಈ ಹಿಂದೆ ಕೂಡಾ ನಟಿ ಅಪ್ಪು ಜೊತೆ ನಟಿಸಿದ್ದರು. ಪವರ್ ಸಿನಿಮಾದಲ್ಲಿ ಪವರ್‌ಸ್ಟಾರ್‌ ಜೊತೆ ತ್ರಿಷಾ ನಟಿಸಿದ್ದರು.