ಮತ್ತೆ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್. 'ದ್ವಿತ್ವ' ತಯಾರಿ ಹೇಗಿದೆ?

'ಜೀಮ್ಸ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿದ ದಿನದಿಂದಲೂ ಸುದ್ದಿಯಲ್ಲಿದ್ದಾರೆ. ಇದೀಗ ಚಿತ್ರದ ನಾಯಕಿಯ ಆಯ್ಕ ನಡೆಯುತ್ತಿದ್ದು, ಬಹುಭಾಷಾ ನಟಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. 

ತೆಲಗು ಚಿತ್ರರಂಗದ ಜನಪ್ರಿಯಾ ನಟಿ ತ್ರಿಷಾ ಕೃಷ್ಣನ್‌ 'ದ್ವಿತ್ವ' ಚಿತ್ರಕತೆ ಕೇಳಿದ್ದಾರೆ, ಇಷ್ಟ ಪಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಇನ್ನು ಚಿತ್ರದಲ್ಲಿ ಪುನೀತ್ ಪಾತ್ರ ಬಿಟ್ಟರೆ ಬೇರೆ ಯಾವ ಪಾತ್ರಧಾರಿಗಳ ಬಗ್ಗೆಯೂ ರಿವೀಲ್ ಮಾಡಿಲ್ಲ. 

ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರ ಪೋಸ್ಟರ್ ವಿವಾದ!

2014ರಲ್ಲಿ ಬಿಡುಗಡೆಯಾದ 'ಪವರ್' ಚಿತ್ರದಲ್ಲಿ ಪುನೀತ್ - ತ್ರಿಷಾ ಕಾಂಬಿನೇಷನ್‌ ಇಷ್ಟಪಟ್ಟಿದ್ದ ಅಭಿಮಾನಿಗಳು ಮತ್ತೆ ಅದೇ ಜೋಡಿಯನ್ನು ತೆರೆ ಮೇಲೆ ನೋಡಲು ಎಕ್ಸೈಟ್ ಆಗಿದ್ದಾರೆ. ಪವನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಪ್ರೀತಾ ಜಯರಾಮನ್‌ ಛಾಯಾಗ್ರಹಣದ ಜೊತೆಗೆ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. 2019ರಲ್ಲಿ 'ಗಾಳಿಪಟ-2' ಸಿನಿಮಾ ಚಿತ್ರೀಕರಣಕ್ಕೆಂದು 6 ವಾರಗಳ ಕಾಲ ನಿರ್ದೇಶಕ ಪವನ್ ಥೈಲ್ಯಾಂಡ್‌ಗೆ ಹೋಗಿದ್ದರು. ಅಲ್ಲಿನ ಕೆಫೆ ಒಂದರಲ್ಲಿ ಚಿತ್ರಕತೆ ಬರೆದು ಪುನೀತ್‌ಗೆ ಕಳುಹಿಸಿದರಂತೆ. ಪುನೀತ್ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಹೊಂಬಾಳೆ ಫಿಲಂ ಜೊತೆ ಮಾತನಾಡಿ, ಬಿಗ್ ಬಜೆಟ್‌ ಸಿನಿಮಾಗೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ.