ಟಾಕ್ಸಿಕ್ ಅಡ್ಡದ EXCLUSIVE ನ್ಯೂಸ್: ಈ ಹೀರೋಯಿನ್ ಜೊತೆ ರಾಕಿಂಗ್ ಸ್ಟಾರ್ ಯಶ್ ಲವ್ ಡ್ಯುಯೆಟ್!

ರಾಕಿಂಗ್ ಸ್ಟಾರ್​ ಯಶ್​​ ಸಿನಿ ಜಗತ್ತಿನ ಬಾಕ್ಸಾಫೀಸ್​​ ದೋಚೋಕೆ ಟಾಕ್ಸಿಕ್​ ಮಹಾ ಗೋಡೆಯನ್ನೇ ಕಟ್ತಾ ಇದ್ದಾರೆ. ಸದ್ಯ ಮುಂಬೈನಲ್ಲಿ ಟಾಕ್ಸಿಕ್ ಶೂಟ್ ನಡೀತಾ ಇದ್ದು, ಹಾಲಿವುಡ್​ ಹಲವು ಕಲಾವಿದರು, ತಂತ್ರಜ್ಞರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 

First Published Nov 18, 2024, 4:19 PM IST | Last Updated Nov 18, 2024, 4:19 PM IST

ರಾಕಿಂಗ್ ಸ್ಟಾರ್​ ಯಶ್​​ ಸಿನಿ ಜಗತ್ತಿನ ಬಾಕ್ಸಾಫೀಸ್​​ ದೋಚೋಕೆ ಟಾಕ್ಸಿಕ್​ ಮಹಾ ಗೋಡೆಯನ್ನೇ ಕಟ್ತಾ ಇದ್ದಾರೆ. ಸದ್ಯ ಮುಂಬೈನಲ್ಲಿ ಟಾಕ್ಸಿಕ್ ಶೂಟ್ ನಡೀತಾ ಇದ್ದು, ಹಾಲಿವುಡ್​ ಹಲವು ಕಲಾವಿದರು, ತಂತ್ರಜ್ಞರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 60 ದಿನಗಳ ಕಾಲ ಸತತ ಶೂಟಿಂಗ್ ಪ್ಲ್ಯಾನ್ ಮಾಡಿದ್ದು ಚಿತ್ರದ ಅರ್ಧದಷ್ಟು ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಬನ್ನಿ ಹಾಗಾದ್ರೆ ಟಾಕ್ಸಿಕ್ ಅಡ್ಡದಲ್ಲಿ ಏನ್ ನಡೀತಾ ಅನ್ನೋ ಎಕ್ಸ್​​ಕ್ಲ್ಯೂಸಿವ್ ಕಹಾನಿಯನ್ನ ನೋಡೋಣ. ಕೆಜಿಎಫ್ ಸೀರೀಸ್​​ನ ಗ್ಲೋಬಲ್ ಸಕ್ಸಸ್ ಬಳಿಕ ಹುಟ್ಟಿಕೊಂಡಿರೋ ಬೆಟ್ಟದಷ್ಟು ನಿರೀಕ್ಷೆಯನ್ನ ತಣಿಸೋಕೆ ಯಶ್ ಮಾಡ್ತಿರೋ ಮೆಗಾಪ್ರಾಜೆಕ್ಟೇ ಟಾಕ್ಸಿಕ್. ಕೆವಿಎನ್ ಸಂಸ್ಥೆ ಜೊತೆಗೆ ಸ್ವತಃ ಯಶ್ ಕೂಡ ಬಂಡವಾಳ ಹೂಡಿ ಬಹುಕೋಟಿ ವೆಚ್ಚದಲ್ಲಿ ಟಾಕ್ಸಿಕ್ ಮೂವಿನ ರೆಡಿ ಮಾಡ್ತಾ ಇದ್ದಾರೆ. ಈಗಾಗ್ಲೇ ಮೊದಲ ಶೆಡ್ಯೂಲ್​ನ ಮುಗಿಸಿ ಮುಂಬೈಗೆ ತೆರಳಿರೋ ಯಶ್ ಅಂಡ್ ಟೀಂ ಭರದಿಂದ ಎರಡನೇ ಹಂತದ ಚಿತ್ರೀಕರಣ ಮಾಡ್ತಾ ಇದೆ. ಅಸಲಿಗೆ ಮುಂಬೈನ ಮಡ್ ಐಲ್ಯಾಂಡ್​​ನಲ್ಲಿ ಟಾಕ್ಸಿಕ್ ಸಿನಿಮಾಗಾಗಿ ಕೋಟ್ಯಂತರ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. 

ಕಳೆದ ತಿಂಗಳು ಇದೇ ಸೆಟ್​​ನಲ್ಲಿ ಕುಳಿತು ಯಶ್ ದಿ ಹಾಲಿವುಡ್ ರಿಪೋರ್ಟರ್​​ಗೆ ಸಂದರ್ಶನ ಕೊಟ್ಟಿದ್ರು. ಈ ಸೆಟ್​​ನಲ್ಲಿ ತುಂಬಾನೇ ಮುಖ್ಯ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ ಅನ್ನೋ ಹಿಂಟ್ ಕೊಟ್ಟಿದ್ರು. ಟಾಕ್ಸಿಕ್​ನಲ್ಲಿ ಯಶ್ ಜೊತೆ ನಾಯಕಿಯಾಗೋ ಗೋಲ್ಡನ್  ಚಾನ್ಸ್ ಯಾರಿಗೆ ಸಿಕ್ಕುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ. ಕಬೀರ್ ಸಿಂಗ್ ಖ್ಯಾತಿಯ ಕೈರಾ ಅಡ್ವಾನಿ ಟಾಕ್ಸಿಕ್​​ಗೆ ನಾಯಕಿಯಗಿದ್ದು, ರಾಕಿ ಜೊತೆ ಡ್ಯುಯೆಟ್ ಹಾಡ್ತಾ ಇದ್ದಾರೆ. ಸದ್ಯ ಪ್ಲ್ಯಾನ್ ಮಾಡಿರೋ ಶೆಡ್ಯೂಲ್​ನಲ್ಲಿ ಯಶ್ ಮತ್ತು ಕೈರಾ ನಡುವಿನ ರೊಮ್ಯಾಂಟಿಕ್ ಸಾಂಗ್​ವೊಂದನ್ನ ಶೂಟ್ ಮಾಡಲಾಗ್ತಾ ಇದೆ. ಹೌದು ಸದ್ಯ ಮುಂಬೈನಲ್ಲಿ ಹಾಕಿರೋ ಸೆಟ್​​ನಲ್ಲಿ ಬಿಗ್ ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡ್ಲಿಕ್ಕೆ ಪ್ಕ್ಯಾನ್ ಮಾಡಲಾಗಿದೆ. ಹಾಲಿವುಡ್​​ನ ಟಾಪ್ ಟೆಕ್ನಿಷಿಯನ್  ಜೆ ಜೆ ಪೆರ್ರಿ ಈ ಸಾಹಸ ದೃಶ್ಯಗಳಿಗೆ ಕೋರಿಯೋಗ್ರಫಿ ಮಾಡ್ತಾ ಇದ್ದಾರೆ. 

ಒಂದು ವಾರದಿಂದ ಜೆ ಜೆ ಪೆರ್ರಿ ಟಾಕ್ಸಿಕ್ ತಂಡದ ಜೊತೆಗೆ ಕೆಲಸ ಮಾಡ್ತಾ ಇದ್ದಾರೆ. ಇನ್ನೂ ಹಾಲಿವುಡ್ ನಟಿ, ಸಾಹಸ ಸಂಯೋಜಕಿ ಟಿಟಿಯಾನಾ ಗೈಡರ್  ಕೂಡ ಟಾಕ್ಸಿಕ್ ತಂಡಕ್ಕೆ ಸೇರಿಕೊಂಡಿದ್ದಾರೆ. ಈ ಹಿಂದೆ ಯಶ್ ಲಂಡನ್​ನಲ್ಲಿ ಜೆಜೆ ಪೆರ್ರಿ ಸ್ಟುಡಿಯೋಗೆ ಭೇಟಿ ಕೊಟ್ಟಾಗ ಟಿಟಿಯಾನಾ ರಾಕಿಗೆ ಶೂಟಿಂಗ್ ಸ್ಕಿಲ್ಸ್ ತೋರಿಸಿಕೊಟ್ಟಿದ್ರು. ಸದ್ಯ ಈ ಹಾಲಿವುಡ್ ಬೆಡಗಿ ರಾಕಿ ಜೊತೆ ಕೈ ಜೋಡಿಸಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ಡ್ರಗ್ ಮಾಫಿಯಾ ಕಥೆ ಇದೆ ಅನ್ನೋದು ಈಗಾಗ್ಲೇ ಗೊತ್ತಾಗಿದೆ. ಈ ಡ್ರಗ್ ದುನಿಯಾದ ವೈಲೆಂಟ್ ಕಥೆ ಜೊತೆಗೆ ಚಿತ್ರದಲ್ಲಿ ರೇಸಿಂಗ್ ಕುರಿತ ಕಹಾನಿ ಕೂಡ ಇದೆಯಂತೆ. ಸೋ ಸಿನಿಮಾದಲ್ಲಿ ಮೈನವಿರೇಳಿಸೋ ರೇಸಿಂಗ್, ಡ್ಯಾಶಿಂಗ್ ಸೀಕ್ವೆನ್ಸ್​​ಗಳಿವೆಯಂತೆ. 

ಸದ್ಯ ಪ್ಕ್ಯಾನ್ ಮಾಡಿರೋ ಈ ಶೆಡ್ಯೂಲ್​ನಲ್ಲೇ ಈ ಎಲ್ಲಾ ಮುಖ್ಯ ದೃಶ್ಯಗಳನ್ನ ಪ್ಲ್ಯಾನ್ ಮಾಡಲಾಗಿದ್ದು ಸತತ 60 ದಿನಗಳ ಕಾಲ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯಲಿದೆ. ಈಗಾಗ್ಲೇ ಬೆಂಗಳೂರಿನಲ್ಲಿ ಹಾಕಿದ್ದ ಸೆಟ್​​ನಲ್ಲಿ 30 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಇನ್ನೂ ಮುಂಬೈನ 60 ದಿನಗಳ ಶೂಟಿಂಗ್ ಕಂಪ್ಲೀಟ್ ಆದ್ರೆ ಟಾಕ್ಸಿಕ್​ ಸಿನಿಮಾದ ಶೇ.50 ರಷ್ಟು ಶೂಟಿಂಗ್ ಮುಗಿದಂತೆ ಲೆಕ್ಕ. ನಿರ್ದೇಶಕಿ ಗೀತು ಮೋಹನ ದಾಸ್ ಜೊತೆಗೆ ಪಕ್ಕಾ ಪ್ಲ್ಯಾನ್ ಮಾಡಿ ಶೂಟಿಂಗ್ ಮಾಡ್ತಿರೋ ಯಶ್, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಿನಿಮಾವನ್ನ ತೆರೆಗೆ ತರೋ ಪ್ಲಾನ್ ಮಾಡಿಕೊಂಡಿದ್ದಾರೆ, ಈ ಹಿಂದೆ 2025 ಏಪ್ರಿಲ್​ಗೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಸಿನಿಮಾ ಸ್ವಲ್ಪ ಮುಂದೆ ಹೋಗಲಿದೆ ಅಂದಿರೋ ರಾಕಿ ಡಿಸೆಂಬರ್ ತಿಂಗಳ ಮೇಲೆ ಕಣ್ಣಿಟ್ಟಿದ್ದಾರೆ. 

ಅಸಲಿಗೆ ಡಿಸೆಂಬರ್ ಅಂದ್ರೆ ಯಶ್ ಪಾಲಿಗೆ ಸಿಕ್ಕಾಪಟ್ಟೆ ಲಕ್ಕಿ ಮಂತ್. ಯಶ್ ಕರೀಯರ್ ದಿಕ್ಕು ಬದಲಿಸಿದ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ತೆರೆಗೆ ಬಂದಿದ್ದು ಡಿಸೆಂಬರ್​ನಲ್ಲಿ ಅಷ್ಟೇಲ್ಲಾ ಯಾಕೆ ರಾಕಿಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿದ ಕೆಜಿಎಫ್ ಪಾರ್ಟ್ -1 ರಿಲೀಸ್ ಆಗಿದ್ದು ಕೂಡ ಡಿಸೆಂಬರ್​ನಲ್ಲೇ.  ಸೋ ಲಕ್ಕಿ ಡಿಸೆಂಬರ್​ನಲ್ಲಿ ಟಾಕ್ಸಿಕ್​ನ ತೆರೆಗೆ ತರೋದಕ್ಕೆ ಯಶ್ ಪ್ಲಾನ್ ಮಾಡಿದ್ದು, ಅದಕ್ಕಾಗೇ ಪಕ್ಕಾ ಪ್ಲಾನಿಂಗ್ ಜೊತೆಗೆ ಮಿಂಚಿನ ವೇಗದಲ್ಲಿ ಶೂಟಿಂಗ್ ಮಾಡ್ತಾ ಇದ್ದಾರೆ. ಕೆಜಿಎಫ್ ಸರಣಿಯ ಸಕ್ಸಸ್ ಬಳಿಕ ವಿಶ್ವವನ್ನೇ ತನ್ನತ್ತ ನೋಡುವಂತೆ ಮಾಡ್ತಿನಿ ಅಂತ ಚಾಲೆಂಜ್ ಮಾಡಿರೋ ಯಶ್, ಟಾಕ್ಸಿಕ್ ಅನ್ನೋ ಎಪಿಕ್ ಮೂವಿನ ರೆಡಿಮಾಡ್ತಿದ್ದಾರೆ. ಈ ಎಪಿಕ್ ನ ನೋಡೋಕೆ ನೀವ್ ಕೂಡ ಸಜ್ಜಾಗಿ.