
ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ಸ್ಪಾಟ್‌ನಲ್ಲಿ ಟೈಟ್ ಸೆಕ್ಯೂರಿಟಿ..! ಯಾಕೆ ಇಷ್ಟೆಲ್ಲಾ ಬಂದೋಬಸ್ತ್..?
ಬಿಲ್ಲ ರಂಗ ಬಾಷ.. ಮ್ಯಾಕ್ಸ್ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ನಟನೆಯಲ್ಲಿ ಬರ್ತಾ ಇರೋ ಮೋಸ್ಟ್ ಅವೇಟೆಡ್ ಮೂವಿ. ಬಿಲ್ಲ ರಂಗ ಬಾಷ ಅನ್ನೋ ಟೈಟಲ್, ಅನೂಪ್ ಭಂಡಾರಿ-ಕಿಚ್ಚ ಕಾಂಬಿನೇಷನ್, ಜೊತೆಗೆ ಈ ಸಿನಿಮಾಗೆ ಸುದೀಪ್ ಸಿದ್ದವಾಗಿರೋ ರೀತಿ ಕಂಡು ಫ್ಯಾನ್ಸ್ ...
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ಬಿಲ್ಲ ರಂಗ ಬಾಷ ಶೂಟಿಂಗ್ ಶುರುವಾಗಿದೆ. ಅದ್ಭುತ ಸೆಟ್ನಲ್ಲಿ ಫುಲ್ ಸೆಕ್ಯೂರಿಟಿ ನಡುವೆ ಕಿಚ್ಚನ ಸಿನಿಮಾದ ಶೂಟಿಂಗ್ ನಡೀತಾ ಇದೆ. ಬಿಲ್ಲ ರಂಗ ಬಾಷ ಅಡ್ಡದಲ್ಲಿ ಏನೆಲ್ಲಾ ನಡೀತಾ ಇದೆ..? ಇಲ್ಲಿದೆ ನೋಡಿ ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ.
ಬಿಲ್ಲ ರಂಗ ಬಾಷ.. ಮ್ಯಾಕ್ಸ್ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ನಟನೆಯಲ್ಲಿ ಬರ್ತಾ ಇರೋ ಮೋಸ್ಟ್ ಅವೇಟೆಡ್ ಮೂವಿ. ಬಿಲ್ಲ ರಂಗ ಬಾಷ ಅನ್ನೋ ಟೈಟಲ್, ಅನೂಪ್ ಭಂಡಾರಿ-ಕಿಚ್ಚ ಕಾಂಬಿನೇಷನ್, ಜೊತೆಗೆ ಈ ಸಿನಿಮಾಗೆ ಸುದೀಪ್ ಸಿದ್ದವಾಗಿರೋ ರೀತಿ ಕಂಡು ಫ್ಯಾನ್ಸ್ ನಡುವೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ.
ಅಸಲಿಗೆ ಕಳೆದ ತಿಂಗಳು 16ನೇ ತಾರೀಖಿನಿಂದಲೇ ಬಿಲ್ಲ ರಂಗ ಬಾಷ ಸಿನಿಮಾ ಶೂಟಿಂಗ್ ಶುರುವಾಗಿದೆ. ಬೆಂಗಳೂರು ಹೊರವಲಯದಲ್ಲಿ ಹಾಕಿರೋ ಬೃಹತ್ ಸೆಟ್ನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೀತಾ ಇದೆ.
ಯಶ್ ಅಮ್ಮ ಪುಷ್ಪಾ: ಡ್ರೈವರ್ ಮಗ ಹೀರೋ ಆಗಿ ಗೆದ್ದಿದ್ದಾನೆ ಎಂದ್ಮೇಲೆ ಡ್ರೈವರ್ ಪತ್ನಿ ...
ಇತ್ತೀಚಿಗೆ ಬಿಗ್ ಸ್ಟಾರ್ಗಳ ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ಕ್ಲಿಪ್ಗಳು ಲೀಕ್ ಆಗಿ ವೈರಲ್ ಆಗೋದು ಕಾಮನ್ ಆಗೋಗಿದೆ. ಅಂತೆಯೇ ಬಿಲ್ಲ ರಂಗ ಬಾಷ ಟೀಂ ಫುಲ್ ಟೈಟ್ ಸೆಕ್ಯೂರಿಟಿ ನಡುವೆ ಶೂಟಿಂಗ್ ಮಾಡ್ತಾ ಇದೆ.
ಬಿಲ್ಲ ರಂಗ ಬಾಷಾ ಫುಲ್ ಟೀಂಗೆ ಐಡಿ ಕಾರ್ಡ್ ಕೊಡಲಾಗಿದೆ. ಸೆಕ್ಯೂರಿಟಿಗಳು ಐಡಿ ಚೆಕ್ ಮಾಡಿನೇ ಸೆಟ್ ಒಳಗೆ ಬಿಡ್ತಾರೆ. ಯಾರು ಬೇಕಾದ್ರೂ ಸೆಟ್ ಒಳಗೆ ಬರೋ ಹಾಗಿಲ್ಲ. ಜೊತೆಗೆ ಸೆಟ್ನಿಂದ ಒಂದೇ ಒಂದು ಫೋಟೋ, ವಿಡಿಯೋ ಲೀಕ್ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲಿಗೆ ನಿರ್ದೇಶಕ ಅನೂಪ್ ಭಂಡಾರಿ ಪಕ್ಕಾ ಪ್ರೊಫೇಷನಲ್ ಆಗಿ ಶೂಟಿಂಗ್ ಮಾಡ್ತಾ ಇದ್ದಾರೆ. ಸದ್ಯ ಖುದ್ದು ಬಿಲ್ಲ ರಂಗ ಬಾಷ ಟೀಂ ಮೇಕಿಂಗ್ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದು ಅದ್ರಲ್ಲಿ ಶೂಟಿಂಗ್ ಹೇಗೆ ನಡೀತಾ ಇದೆ ಅನ್ನೋ ಝಲಕ್ ನ ರಿವೀಲ್ ಮಾಡಲಾಗಿದೆ.
ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದಂತೆ ನಟಿಸಿ ಮತ್ತೊಂದು ವಿವಾದಕ್ಕೆ ಕೈ ಹಾಕಿದ್ರಾ ಜಾವೇದ್ ಅಖ್ತರ್..?!
ಇನ್ನೂ ಈ ವಿಡಿಯೋದಲ್ಲಿ ಕಿಚ್ಚನ ಖಡಕ್ ಎಂಟ್ರಿ ಕೂಡ ಇದೆ. ಆದ್ರೆ ಸುದೀಪ್ ಲುಕ್ನ ರಿವೀಲ್ ಮಾಡಿಲ್ಲ. ಅದನ್ನ ನೋಡಬೇಕು ಅಂದ್ರೆ ನೀವಿನ್ನೂ ಸ್ವಲ್ಪ ಕಾಯಲೇಬೇಕು. ಯಾಕಂದ್ರೆ ಬಿಲ್ಲ ರಂಗ ಭಾಷ ಒಂದು ಸರ್ಪ್ರೈಸ್ ಪ್ಯಾಕೇಜ್..
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..