'ತನುಜಾ' ಸಿನಿಮಾದ ಹಾಡುಗಳು ಬಿಡುಗಡೆ: ಇದು ವಿದ್ಯಾರ್ಥಿನಿಯ ರಿಯಲ್ ಕತೆ

ಕನ್ನಡದಲ್ಲಿ ತನುಜಾ ಎನ್ನುವ ಸಿನಿಮಾ ಸಿದ್ಧವಾಗಿದ್ದು, ಬೆಂಗಳೂರಿನಲ್ಲಿ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆದಿದೆ.

Share this Video
  • FB
  • Linkdin
  • Whatsapp

ಕೊರೋನಾದಿಂದ ಲಾಕ್ ಡೌನ್ ಮಾಡಿದ ಸಮಯದಲ್ಲಿ 350 ಕಿ.ಮೀ ದೂರದಿಂದ ಬೆಂಗಳೂರಿಗೆ ಬಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಬೇಕಿತ್ತು. ಆ ವಿದ್ಯಾರ್ಥಿನಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಸಹಾಯ ಮಾಡಿದ್ದರು. ಈ ವಿಚಾರ ಅಂದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದೀಗ ಈ ಘಟನೆ ಸಿನಿಮಾ ರೂಪ ಪಡೆದಿದ್ದು, ತನುಜಾ ಎನ್ನುವ ಸಿನಿಮಾ ಸಿದ್ಧವಾಗಿದೆ. ಇನ್ನು ಬಿ.ಎಸ್.ವೈ ತನುಜಾ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಸಚಿವ ಕೆ. ಸುಧಾಕರ್ ಪತ್ರಕರ್ತ ವಿಶ್ವೇಶ್ವರ್ ಭಟ್ ಕೂಡ ನಟಿಸಿದ್ದಾರೆ. ಸಿನಿಮಾವನ್ನು ಹರೀಶ್ ಎಂ.ಡಿ ಹಳ್ಳಿ ನಿರ್ದೇಶನ ಮಾಡಿದ್ದು, ಸಪ್ತ ಪಾವೂರು ತನುಜಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 3ರಂದು ಸಿನಿಮಾ ತೆರೆ ಮೇಲೆ ಬರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video