Asianet Suvarna News Asianet Suvarna News

Gandhada Gudi ಗಂಧದ ಗುಡಿಯಲ್ಲಿ ನನ್ನ ತವರೂರನ್ನು ಹೊಗಳಿದ್ದಾರೆ: ಡಾ. ಸುಧಾಮೂರ್ತಿ ಸಂತಸ

ಗಂಧದ ಗುಡಿ ಸಿನಿಮಾದಲ್ಲಿ ಬೇಕಾದಷ್ಟು ಸಾಹಸಗಳಿವೆ. ಸಿನಿಮಾ ನೋಡಿ ಬಹಳ ಸಂತೋಷವಾಯಿತು ಎಂದು ಡಾ. ಸುಧಾಮೂರ್ತಿ ಹೇಳಿದರು.
 

First Published Oct 28, 2022, 12:39 PM IST | Last Updated Oct 28, 2022, 12:46 PM IST

ಗಂಧದ ಗುಡಿ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ಇಂದಿನ ಯಂಗ್‌ ಸ್ಟಾರ್ಸ್‌ ಅಲ್ಲಿ ಇಲ್ಲಿ ಟೈಮ್‌ ಹಾಳು ಮಾಡುವ ಬದಲು ದಯವಿಟ್ಟು ಹೀಗೆ ಎಲ್ಲಿಯಾದರೂ ಹೋಗಿ, ನಮ್ಮ ಜನರನ್ನು ನೋಡಿ ನಮ್ಮ ನಿಸರ್ಗ ಸಂಪತ್ತನ್ನು ನೋಡಿ ಆನಂದಿಸಿ ಮತ್ತು ಅದನ್ನು ಉಳಿಸಲಿಕ್ಕೆ ಪ್ರಯತ್ನಿಸಿ ಎಂದರು. ಸಿನಿಮಾದಲ್ಲಿ ನನ್ನ ತವರೂರು ಉತ್ತರ ಕರ್ನಾಟವನ್ನು ಬಹಳ ಹೊಗಳಿದ್ದಾರೆ, ತುಂಬಾ ಸಂತೋಷವಾಯಿತು. ನನಗೆ ಬಹಳ ಹೆಮ್ಮೆ ಇದೆ, ಅವರು ಉತ್ತರ ಕರ್ನಾಟಕದ ಬಗ್ಗೆ ಹೇಳಿರುವುದು ಎಂದರು. ಹಳ್ಳಿಯ ಜನರ ಮುಗ್ಧತೆಯನ್ನು ಪುನೀತ್‌ ಅವರು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದರು.

ಮನೆ ಕೆಲಸ ಮಾಡೋಕೆ ಇಷ್ಟನೇ ಇಲ್ಲ, ಗಂಡನ್ ಕೆಲ್ಸಾನೂ ನಾನೇ ಮಾಡ್ಬೇಕು: ನಿವೇದಿತಾ ಗೌಡ

Video Top Stories