
ಒಂದೇ ಸಿನಿಮಾ, ಆರು ರೆಕಾರ್ಡ್; ದಾಖಲೆಗಳ ಸರದಾರ ಕಿಚ್ಚ ಸುದೀಪ್
ಕಿಚ್ಚನ ಶ್ರಮ, ಹಾಗು ಸಿನಿಮಾದ ಹಸಿವಿನ ಫಲ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾದಲ್ಲಿ ಇತಿಹಾಸ ಸೃಷ್ಟಿಸಿದೆ. ಆ ಇತಿಹಾಸದ ಜೊತೆ ಆರು ರೆಕಾರ್ಡ್ ಗಳನ್ನು ಬರೆದಿದ್ದಾರೆ. ಇಷ್ಟು ದಿನ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಬಾದ್ಷಾ ಆಗಿದ್ದ ಕಿಚ್ಚ ವಿಕ್ರಾಂತ್ ರೋಣ ಸಿನಿಮಾದಿಂದ ಆಲ್ ಇಂಡಿಯಾ ಬಾಕ್ಸಾಫೀಸ್ನಲ್ಲಿ ರೆಕಾರ್ಡ್ ಬರೆಯೋ ಸ್ಟಾರ್ ಲಿಸ್ಟ್ ಗೆ ಸೇರಿದ್ದಾರೆ.
ಕೋಟಿಗೊಬ್ಬ ಕಿಚ್ಚ ಈಗ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕಿಚ್ಚನ 26 ವರ್ಷದ ಜರ್ನಿಯ ಏನು ಅಂತ ನಿಮಗೆಲ್ಲಾ ಗೊತ್ತೇ ಇದೆ. ಯಾವ ಸಿನಿಮಾ ಹಿನ್ನೆಲೆಯೂ ಇಲ್ಲದೇ ಬಣ್ಣದ ಜಗತ್ತಿಗೆ ಬಂದು, ತನ್ನ ಕೋಟೆಯನ್ನ ತಾನೆ ಕಷ್ಟಪಟ್ಟು ಕಟ್ಟಿಕೊಂಡ ನಟ ಸುದೀಪ್, ಭಾರತೀಯ ಚಿತ್ರರಂಗದ ಬಾದ್ಷಾ. ಆಲ್ ಇಂಡಿಯಾ ಕಟೌಟ್ ಆಗಿದ್ದು ಗೊತ್ತೇ ಇದೆ. ಇದೀಗ ಕಿಚ್ಚನ ಶ್ರಮ, ಹಾಗು ಸಿನಿಮಾದ ಹಸಿವಿನ ಫಲ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾದಲ್ಲಿ ಇತಿಹಾಸ ಸೃಷ್ಟಿಸಿದೆ. ಆ ಇತಿಹಾಸದ ಜೊತೆ ಆರು ರೆಕಾರ್ಡ್ ಗಳನ್ನು ಬರೆದಿದ್ದಾರೆ. ಇಷ್ಟು ದಿನ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಬಾದ್ಷಾ ಆಗಿದ್ದ ಕಿಚ್ಚ ವಿಕ್ರಾಂತ್ ರೋಣ ಸಿನಿಮಾದಿಂದ ಆಲ್ ಇಂಡಿಯಾ ಬಾಕ್ಸಾಫೀಸ್ನಲ್ಲಿ ರೆಕಾರ್ಡ್ ಬರೆಯೋ ಸ್ಟಾರ್ ಲಿಸ್ಟ್ ಗೆ ಸೇರಿದ್ದಾರೆ. ಯಾಕಂದ್ರೆ ಅಭಿನಯ ಚಕ್ರವರ್ತಿಯ ವಿಕ್ರಾಂತ್ ರೋಣ ಸಿನಿಮಾ ಮೂರು ದಿನದಲ್ಲಿ 75 ಕೋಟಿ ಕಲೆಕ್ಷನ್ ಮಾಡಿದ್ದು, ಈ ವೀಕ್ಎಂಡ್ ಮುಗಿಯುತ್ತಿದ್ದಂತೆ 100 ಕೋಟಿ ಕ್ಲಬ್ ಸೇರೋ ಹೊಸ್ತಿಲಲ್ಲಿದೆ. ಹೀಗಾಗಿ ಸುದೀಪ್ ಭಾರತೀಯ ಚಿತ್ರರಂಗದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡೋ ಟಾಪ್ ಸ್ಟಾರ್ಸ್ ಲೀಸ್ಟ್ ಗೆ ಎಂಟ್ರಿ ಕೊಟ್ಟಿದ್ದಾರೆ.