ಎಸ್‌ಪಿಬಿ ಎಂಬ ಸ್ವರ ಮಾಂತ್ರಿಕನ 51 ದಿನಗಳ ಹೋರಾಟ ಹೀಗಿತ್ತು
ಸ್ವರ ಮಾಂತ್ರಿಕ, ಸಂಗೀತ ಸಾಮ್ರಾಟ ಎಸ್‌ಪಿಬಿ ತಮ್ಮ ಗಾಯನವನ್ನು ನಿಲ್ಲಿಸಿದ್ದಾರೆ. ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸುಮಾರು 51 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಎಸ್‌ಪಿಬಿ ಆರೋಗ್ಯದಲ್ಲಿ ಚೇತರಿಕೆ ಎಂಬ ಸುದ್ದಿ ಕೇಳಿದಾಗ ಅಭಿಮಾನಿಗಳಿಗಾದ ಸಂತಸ ಅಷ್ಟಿಷ್ಟಲ್ಲ.
ಬೆಂಗಳೂರು (ಸೆ. 26): ಸ್ವರ ಮಾಂತ್ರಿಕ, ಸಂಗೀತ ಸಾಮ್ರಾಟ ಎಸ್‌ಪಿಬಿ ತಮ್ಮ ಗಾಯನವನ್ನು ನಿಲ್ಲಿಸಿದ್ದಾರೆ. ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸುಮಾರು 51 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಎಸ್‌ಪಿಬಿ ಆರೋಗ್ಯದಲ್ಲಿ ಚೇತರಿಕೆ ಎಂಬ ಸುದ್ದಿ ಕೇಳಿದಾಗ ಅಭಿಮಾನಿಗಳಿಗಾದ ಸಂತಸ ಅಷ್ಟಿಷ್ಟಲ್ಲ. ಇನ್ನು ಬೇಗ ಗುಣಮುಖರಾಗಿ ಹೊರ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಪ್ರಾರ್ಥನೆ ಫಲಿಸಲಿಲ್ಲ.
ಎಸ್‌ಪಿಬಿ ಪ್ರೀತಿಯ ಶಿಷ್ಯಂದಿರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಭಾವುಕರಾಗಿದ್ದು ಹೀಗೆ
ಓದಿದ್ದು ಎಂಜಿನೀಯರಿಂಗ್, ಕಾಲಿಟ್ಟಿದ್ದು ಸಂಗೀತ ಕ್ಷೇತ್ರಕ್ಕೆ. 16 ಭಾಷೆಗಳಲ್ಲಿ ಹಾಡಿದ್ದು ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು. ಸತತ ಐದು ದಶಕಗಳ ಕಾಲ ದಣಿವರಿಯದ ಸಂಗೀತ ಸೇವೆ ಅವರದ್ದು. ಎಸ್‌ಪಿಬಿಯವರ ಸಂಗೀತ ಜರ್ನಿ, 51 ದಿನಗಳ ಕಾಲ ಇವರ ಹೋರಾಟ ಹೇಗಿತ್ತು? ನೋಡೋಣ ಬನ್ನಿ..!