ಎಸ್‌ಪಿಬಿ ಪ್ರೀತಿಯ ಶಿಷ್ಯಂದಿರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಭಾವುಕರಾಗಿದ್ದು ಹೀಗೆ

ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಕನ್ನಡಕ್ಕೂ ಎಸ್‌ಪಿಬಿಗೂ ಅವಿನಾಭಾವ ಸಂಬಂಧ ಇದೆ. ಕನ್ನಡದ ಹೆಮ್ಮೆಯ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ವಿಜಯ್ ಪ್ರಕಾಶ್ ಅವರು ನೆಚ್ಚಿನ ಗುರುವಿನ ಅಗಲಿಕೆಯಿಂದ ಭಾವುಕರಾದರು. ರಾಜೇಶ್ ಕೃಷ್ಣನ್‌ ಬಹಳ ಹತ್ತಿರದಿಂದ ಒಡನಾಟ ಇಟ್ಟುಕೊಂಡವರು. ಅಗಲಿಕೆಯ ನೋವನ್ನು ತಡೆಯಲಾರದೇ ಕಣ್ಣೀರಿಟ್ಟರು. 
 

First Published Sep 25, 2020, 5:07 PM IST | Last Updated Sep 25, 2020, 5:07 PM IST

ಬೆಂಗಳೂರು (ಸೆ. 25): ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಕನ್ನಡಕ್ಕೂ ಎಸ್‌ಪಿಬಿಗೂ ಅವಿನಾಭಾವ ಸಂಬಂಧ ಇದೆ. ಕನ್ನಡದ ಹೆಮ್ಮೆಯ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ವಿಜಯ್ ಪ್ರಕಾಶ್ ಅವರು ನೆಚ್ಚಿನ ಗುರುವಿನ ಅಗಲಿಕೆಯಿಂದ ಭಾವುಕರಾದರು. ರಾಜೇಶ್ ಕೃಷ್ಣನ್‌ ಬಹಳ ಹತ್ತಿರದಿಂದ ಒಡನಾಟ ಇಟ್ಟುಕೊಂಡವರು. ಅಗಲಿಕೆಯ ನೋವನ್ನು ತಡೆಯಲಾರದೇ ಕಣ್ಣೀರಿಟ್ಟರು. 

'ನನಗೆ ಎಸ್‌ಪಿಬಿ ಅಂದ್ರೆ ಗುರು, ಮೆಂಟರ್, ಎಲ್ಲವೂ ಆಗಿದ್ದರು. ನಮ್ಮಿಬ್ಬರ ನಂಟನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲ. ಇಂತಹ ಅದ್ಭುತ  ಗಾಯಕ ಮತ್ತೆ ಹುಟ್ಟಿ ಬರಲು ಇನ್ನೆಷ್ಟೋ ವರ್ಷಗಳು ಬೇಕಾಗಬಹುದು. ಅವರ ವ್ಯಕ್ತಿತ್ವ ಅಂತದ್ದು' ಎಂದು ರಾಜೇಶ್ ಕೃಷ್ಣನ್ ಭಾವುಕರಾದರು. 

ಮಗಳು ಪಲ್ಲವಿಗಾಗಿ ಈ ಚಟವನ್ನೇ ಬಿಟ್ಟಿದ್ದರು SPB!

'ಇತ್ತೀಚಿಗೆ ನಾವು ದೆಹಲಿಗೆ ಹೋಗಿದ್ದಾಗ 2 ದಿನ ಒಟ್ಟಿಗೆ ಇದ್ವಿ. ಸಾಕಷ್ಟು ಮಾತನಾಡಿದ್ವಿ. ಸಂಗೀತದ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರ ಜೊತೆ ಕಳೆದ ದಿನಗಳನ್ನು ನಾನು ಯಾವತ್ತೂ ಮರೆಯಲ್ಲ. ಬಹಳ ನಿಗರ್ವಿ ವ್ಯಕ್ತಿ. ಬರೀ ಸಂಗೀತ ಮಾತ್ರವಲ್ಲ, ಸಮಾಜದ ಬಗ್ಗೆಯೂ ಅವರಿಗೆ ಚಿಂತನೆ ಇತ್ತು' ಎಂದು ವಿಜಯ್ ಪ್ರಕಾಶ್ ಹೇಳಿದ್ದಾರೆ.