ಡಾ. ರಾಜ್ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !
ಕರುನಾಡಿನ ಜನತೆ ವೀರಪ್ಪನ್ ಭಯದಲ್ಲಿ ಮುಳುಗಿದ್ದ ದಿನಗಳಲ್ಲಿ ರಾಜ್‌ಕುಮಾರ್ ಅವರ ಬಿಡುಗಡೆಗೆ ಎಸ್.ಎಂ. ಕೃಷ್ಣ ಅವರು ರಹಸ್ಯ ವ್ಯೂಹ ರೂಪಿಸಿದ್ದರು. ಗೋವಿಂದರಾಜು ಬಿಡುಗಡೆಯ ನಂತರ, ರಾಜ್‌ಕುಮಾರ್ ಅವರ ಆರೋಗ್ಯ ಹದಗೆಡುತ್ತಿರುವ ಸುದ್ದಿ ಆತಂಕ ಹೆಚ್ಚಿಸಿತ್ತು. ಕೇಂದ್ರ ಸರ್ಕಾರದ ಒಪ್ಪಿಗೆಯ ಹೊರತಾಗಿಯೂ ಕೋರ್ಟ್ ವೀರಪ್ಪನ್ ಸಹಚರರ ಬಿಡುಗಡೆಗೆ ಅವಕಾಶ ನೀಡಲಿಲ್ಲ.
ಅವು ಅದೆಂಥಾ ಅತಂಕದ ದಿನಗಳು ಅಂದ್ರೆ, ಕರುನಾಡಿನ ಜನತೆ ಪ್ರತಿದಿನವೂ ಏನಾಗಿಬಿಡುತ್ತೋ ಅನ್ನೋ ಭಯದಲ್ಲಿ ಮುಳುಗಿದ್ರು. ನರಹಂತಕ ವೀರಪ್ಪನ್, ರಾಜ್ಕುಮಾರ್ಗೆ ಏನು ಮಾಡಿಬಿಡ್ತಾನೋ ಅನ್ನೋ ಆತಂಕದಲ್ಲಿ ದಿನದೂಡ್ತಾ ಇದ್ರು. ಅಣ್ಣಾವ್ರಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತೆ ಅನ್ನೋ ವಿಚಾರ ಮುಖ್ಯಮಂತ್ರಿ ಎಸ್,ಎಂ ಕೃಷ್ಣಗಿತ್ತು. ಇಂಥಾ ಸಮಯದಲ್ಲಿ ಯಾರು ತಾನೇ ನೆಮ್ಮದಿಯಿಂದ ನಿದ್ರಿಸೋಕೆ ಸಾಧ್ಯ..?
ಎಸ್.ಎಂ ಕೃಷ್ಣ - ತಮಿಳುನಾಡು ಸರ್ಕಾರದ ಜೊತೆಗೂಡಿ ಸಂಧಾನಕಾರರನ್ನ ಕಳುಹಿಸಿ, ರಾಜ್ ಬಿಡುಗಡೆಗೆ ಅವಿರತ ಪ್ರಯತ್ನ ಮಾಡ್ತಾ ಇದ್ರು. ನೆಡುಮಾರನ್ ಸಂಧಾನಕಾರನಾಗಿ ಎಂಟ್ರಿ ಕೊಟ್ಟ ಮೇಲೆ ತಕ್ಕ ಮಟ್ಟಿಗೆ ಸಂಧಾನ ಫಲಪೃದವಾಯ್ತು. ಮೊದಲ ಹಂತದಲ್ಲಿ ರಾಜ್‌ಕುಮಾರ್ ಅಳಿಯ ಗೋವಿಂದರಾಜು ರಿಲೀಸ್ ಅದ್ರು. ಗೋವಿಂದ್ರಾಜುರನ್ನ ಕೂರಿಸಿಕೊಂಡು ಅಲ್ಲಿನ ಸಕಲ ವಿಷಯ ತಿಳಿದುಕೊಂಡು ಮುಂದಿನ ಹೆಜ್ಜೆ ಇಟ್ರು ಎಸ್.ಎಂ ಕೃಷ್ಣ.
ಒಂದು ಹಂತದಲ್ಲಿ ಕೇಂದ್ರ ಸರ್ಕಾರವೇ ವೀರಪ್ಪನ್ ಸಹಚರರ ಬಿಡುಗಡೆಗೆ ಒಪ್ಪಿಗೆ ಕೊಟ್ರೂ, ಕೋರ್ಟ್ ಇದಕ್ಕೆ ಅವಕಾಶ ಕೊಡಲಿಲ್ಲ. ಅರಣ್ಯದಲ್ಲಿದ್ದ ಡಾ.ರಾಜ್‌ಕುಮಾರ್ ಆರೋಗ್ಯ ಕೂಡ ಹದಗೆಡ್ತಾ ಇದೆ ಅನ್ನೋ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಮಾಡ್ತಾ ಇತ್ತು. ಆ ಹಂತದಲ್ಲೇ ಹಲವಾರು ರಹಸ್ಯ ಮಾತುಕಥೆಗಳನ್ನ ಮಾಡಿ, ಕೊನೆಗೂ ಅಣ್ಣಾವ್ರ ರಿಲೀಸ್ಗೆ ಕೃಷ್ಣ ಒಂದು ವ್ಯೂಹವನ್ನ ರೂಪಿಸಿದ್ರು. ಅಂಬರೀಷ್ ರಜಿನಿಕಾಂತ್ ಮತ್ತು ಕೃಷ್ಣ ಬಿಟ್ರೆ ಆ ವಿಚಾರ ಯಾರಿಗೂ ತಿಳಿದಿರಲಿಲ್ಲ... ಅದೇನು ಅಂತ ವಿಡಿಯೋ ನೋಡಿ...