Asianet Suvarna News Asianet Suvarna News

ಕಾಟೇರನಿಗೆ ಕಾನೂನಿನ ಕೋಳ ತೊಡಿಸಿದ್ದೇ ಸಿದ್ದರಾಮಯ್ಯನ ಖಡಕ್ ನಿರ್ಧಾರ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗುತ್ತಿದೆ. ಚುನಾವಣೆಯಲ್ಲಿ ದರ್ಶನ್ ಪರ ಪ್ರಚಾರ ನಡೆಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

First Published Aug 28, 2024, 1:59 PM IST | Last Updated Aug 28, 2024, 1:59 PM IST

ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಶಿಕ್ಷೆ ಅನುಭವಿಸಲು ಹೋಗಿದ್ದ ಸೆರೆಮನೆಯನ್ನೇ ಅರಮನೆಯಾಗಿಸಿಕೊಂಡಿದ್ದ ಕಾಟೇರನಿಗೆ ಮತ್ತೆ ಕಂಟಕ ಶುರುವಾಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾವಣೆ ಆಗಲಿದ್ದಾನೆ. ಇನ್ನು ವಿಧಾನಸಭಾ ಚುನಾವಣೆಯ ವೇಳೆ ತಮ್ಮ ಪರವಾಗಿ ಪ್ರಚಾರ ನಡೆಸಿದ ದರ್ಶನ್ ತಪ್ಪು ಮಾಡಿದ್ದರಿಂದ ಯಾವುದೇ ಮುಲಾಜೂ ನೋಡದೇ ಸಿಎಂ ಸಿದ್ದರಾಮಯ್ಯ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಹಳೆಯ ಋಣ, ಮೈಸೂರು ಸ್ನೇಹ, ನಮ್ಮ ಹುಡುಗ, ಪ್ರೀತಿ ಅಭಿಮಾನ ಎಂದಿದ್ದ ಎಲ್ಲವನ್ನೂ ಬದಿಗಿಟ್ಟು ಕೊಲೆ ಆರೋಪಿ ದರ್ಶನ್ ವಿಚಾರದಲ್ಲಿ ಸಿಎಂ ಖಡಕ್ ತೀರ್ಮಾನದಿಂದ ಕಾಟೇರನಿಗೆ ಭಾರಿ ಸಂಕಷ್ಟ ಎದುರಾಗಿದೆ.

ದರ್ಶನ್ ಕೇಸಿನಲ್ಲಿ ಸಿದ್ದರಾಮಯ್ಯನವರು ಹೆಜ್ಜೆ ಹೆಜ್ಜೆಗೂ ಖಡಕ್ ರಾಮಯ್ಯನಾಗಿದ್ದಾರೆ. ದರ್ಶನ್ ಅರೆಸ್ಟ್ ಆದಾಗಿನಿಂದ ಹಿಡಿದು ಪರಪ್ಪನ ಅಗ್ರಹಾರ ಜೈಲು ಸೇರವವರೆಗೆ ಪ್ರತೀ ಹಂತದಲ್ಲೂ ಪೊಲೀಸರ ಬೆನ್ನಿಗೆ ನಿಂತು ಕಾಟೇರನಿಗೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ದರ್ಶನ್ ವಿಚಾರದಲ್ಲಿ ಸಿದ್ದರಾಮಯ್ಯ ಖಡಕ್ ರಾಮಯ್ಯನಾಗಲು ಕಾರಣ ಏನ್ ಗೊತ್ತಾ? ಅದೊಂದು ಫೋಟೋ. ಆಪೋಟೋವನ್ನು ನೋಡಿದ ನಂತರ ಸಿಎಂ ಸಿದ್ದರಾಮಯ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹೆಜ್ಜೆ ಹೆಜ್ಜೆಗೂ ಶಾಕ್ ಕೊಟ್ಟಿದ್ದಾರೆ. ಕೊಲೆ ಮಾಡಿ ಜೈಲು ಸೇರಿದ್ದ ಕಾಟೇರನ ಕೊರಳಿಗೆ ಕಾನೂನಿನ ಉರುಳು ಸುತ್ತಿಕೊಳ್ಳುವಂತೆ ಮಾಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆಗಿ ನಿಲ್ಲದೇ ಹೋಗಿದ್ದರೆ ಕೇಸ್ ಹಳ್ಳ ಹಿಡೀತಾ ಇತ್ತು. ದರ್ಶನ್ ಬಚಾವ್ ಆಗುತ್ತಿದ್ದನು. ಆದರೆ, ಸಿದ್ದರಾಮಯ್ಯ ಖಡಕ್ ಆಗಿ ತೀರ್ಮಾನ ಮಾಡಿದ್ದರಿಂದಲೇ ದರ್ಶನ್ ಲಾಕ್ ಆಗಿದ್ದು. ನಂತರ ಇಡೀ ಕೇಸಿಗೆ ನ್ಯಾಯ ಸಿಗುತ್ತಿದೆ. ಆಡಳಿತ ಮಾಡುವ ಸರ್ಕಾರ ಎಲ್ಲಾ ಪ್ರಕರಣಗಳಲ್ಲೂ ಇಂಥದ್ದೇ ಗಟ್ಟಿತನವನ್ನು ತೋರಿಸಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

Video Top Stories