ತೆರೆಮೇಲೆ ಅಣ್ಣಾವ್ರ ಮೊಮ್ಮಗ ಧೀರೆನ್ ದರ್ಬಾರ್; ಸಿನಿಮಾ ನೋಡಿ ಶಿವಣ್ಣ ಹೇಳಿದ್ದೇನು?


ಡಾ.ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವ ಹೀರೋ ಎಂಟ್ರಿಯಾಗಿದೆ. ಹೌದು, ಡಾ ರಾಜ್ ಕುಮಾರ್  ಮಗಳ ಮಗ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 

First Published Aug 29, 2022, 6:40 PM IST | Last Updated Aug 29, 2022, 6:40 PM IST

ಡಾ.ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವ ಹೀರೋ ಎಂಟ್ರಿಯಾಗಿದೆ. ಹೌದು, ಡಾ ರಾಜ್ ಕುಮಾರ್  ಮಗಳ ಮಗ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಶಿವ 123 ಸಿನಿಮಾ ಮೂಲಕ ಧೀರೆನ್ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ಧೀರೆನ್ ನಟನೆಯ ಬಗ್ಗೆ ರಾಜ್ ಕುಟುಂಬ ಸಹ ಹಾಡಿಹೊಗಳಿದ್ದಾರೆ. ಧೀರೆನ್ ರಾಮ್ ಕುಮಾರ್ ಸಿನಿಮಾವನ್ನು ರಾಜ್ ಕುಟುಂಬ ಮೆಚ್ಚಿಕೊಂಡಿದೆ. ಇತ್ತೀಚಿಗಷ್ಟೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಿವ 123 ಸಿನಿಮಾವನ್ನು ವೀಕ್ಷಿಸಿದ್ದಾರೆ.  ಸಿನಿಮಾ ಶಿವಣ್ಣ ಕೂಡ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಧೀರೆನ್ ಮತ್ತೋರ್ವ ಶಿವರಾಜ್ ಕುಮಾರ್ ಆಗಬಾರದು ಎಂದು ಹೇಳಿದ್ದಾರೆ. ಶಿವ 123 ಸಿನಿಮಾ ತೆಲುಗಿನ ಆರ್ ಎಕ್ಸ್ 100 ಸಿನಿಮಾದ ರಿಮೇಕ್ ಆಗಿದೆ. ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸಿದ್ದಾರೆ. 

Read More...