ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ.

Share this Video
  • FB
  • Linkdin
  • Whatsapp

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ. ಅಣ್ಣಾವ್ರು ತಮ್ಮ ಹುಟ್ಟೂರಾದ ಗಾಜನೂರಿಗೆ ಹೋದ್ರೆ ತಮ್ಮ ಜಮೀನಿನಲ್ಲಿರೋ ಆಲದ ಮರದ ಕೆಳೆಗೆ ಮಗುವಿನಂತೆ ಕುಳಿತು ಬಿಡ್ತಿದ್ರು. ಈಗ ಆ ಆಲದ ಮರವನ್ನ ಉಳಿಸಿಕೊಂಡು ಬೆಳಸಿಕೊಂಡು ಹೋಗುವ ಜವಾಬ್ದಾರಿ ಶಿವಣ್ಣನಿಗೆ.

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಈಗ ವಡಾ ಪಾವ್! ಏನ್ ಕಥೆ ಗುರು..?

ಗಾಜನೂರಿನ ದೊಡ್ಡ ಆಲದ ಮರ ಇರೋ ಜಮೀನು ಶಿವಣ್ಣ ಪಾಲಿಗೆ ಸಿಕ್ಕಿದ್ಯಂತೆ. ಶಿವಣ್ಣ ಆ ಜಮೀನಿನಲ್ಲಿ ಇಂದಿಷ್ಟು ಕೃಷಿ ಮಾಡಬೇಕು ಎಂದಿಕೊಂಡಿದ್ದಾರೆ. ಪ್ರತಿ ಬಾರಿ ಗಾಜನೂರಿಗೆ ಭೇಟಿಕೊಟ್ಟಾಗ ಶಿವಣ್ಣ ತಪ್ಪದೆ ಅಪ್ಪನ ಹಾಗೂ ಅಪ್ಪುವಿನ ನೆಚ್ಚಿನ ಆಲದ ಮರದ ಬಳಿ ಕೆಲ ಹೊತ್ತು ಕಾಲ ಕಳೆಯುತ್ತಾರೆ...

ಸದ್ಯ ಅಣ್ಣಾವ್ರ ಆಸ್ತಿಯಲ್ಲಿ ಶಿವರಾಜ್ ಕುಮಾರ್ ಪಾಲಿಗೆ ಬಂದಿರೋ ಜಮೀನಿನಲ್ಲಿ ಆಲದ ಮರವನ್ನ ಹಾಗೆ ಉಳಿಸಿಕೊಂಡು ಮಿಕ್ಕ ಜಾಗದಲ್ಲಿ ಹಣ್ಣಿನ ಗಿಡಗಳನ್ನ ಹಾಕಲು ನಿರ್ಧರಿಸಿದ್ದಾರಂತೆ..ಆ ಹಣ್ಣುಗಳನ್ನ ಹಕ್ಕಿ ಪಕ್ಷಿಗಳು ಮಾತ್ರ ತಿನ್ನಬೇಕು ಅನ್ನೋದು ಶಿವಣ್ಣ ಅವ್ರ ನಿರ್ಧಾರ ಇದು ಅಣ್ಣಾವ್ರ ಆಸೆಯಂತೆ...ಅದ್ರ ಜೊತೆಗೆ ಡಾ ರಾಜ್ ಕುಮಾರ್ ಹುಟ್ಟಿದ ಮನೆಯಂತೆಯೇ ಅಲ್ಲೊಂದು ಮನೆ ಕಟ್ತಾರಂತೆ...

Related Video