Shiva Rajkumar: ರಜನಿಕಾಂತ್‌ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಎಂಟ್ರಿ: ಬಹುದಿನಗಳ ಕನಸು ನನಸು!

ಶಿವರಾಜ್‌ಕುಮಾರ್ ತಮ್ಮ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ ಕಾಲಿವುಡ್‌ನ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಶಿವರಾಜ್‌ಕುಮಾರ್ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದು ಹೊಸ ಹೊಸ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ಈ ಮಧ್ಯೆ ಶಿವರಾಜ್‌ಕುಮಾರ್ ತಮ್ಮ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ ಕಾಲಿವುಡ್‌ನ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಹಾಗೂ ಶಿವರಾಜ್‌ಕುಮಾರ್ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಲಿವುಡ್‌ನ ಸಿನಿಮಾ ಅಭಿಮಾನಿಗಳ ಪಾಲಿನ ದೇವರು ಎಂದೇ ಕರೆಸಿಕೊಳ್ಳುವವರು ರಜನಿಕಾಂತ್. 

ಅದೇ ರೀತಿ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಎಂದೆಂದಿಗೂ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿರುವವರು ಶಿವರಾಜ್‌ಕುಮಾರ್ ಈ ಇಬ್ಬರು ಸ್ಟಾರ್‌ಗಳನ್ನ ಇಂದೇ ಚಿತ್ರದಲ್ಲಿ ನೋಡೋ ಸೌಭಾಗ್ಯ ಇನ್ನು ಕೆಲವೇ ದಿನಗಳಲ್ಲಿ ಅಭಿಮಾನಿಗಳಿಗೆ ಸಿಗಲಿದೆ. ಈ ಮೂಲಕ ಚಿತ್ರ ಪ್ರೇಮಿಗಳ ಬಹುದಿನದ ಕನಸು ನನಸಾಗಲಿದೆ. ರಜನಿಕಾಂತ್ ಅಭಿನಯದ ಮುಂದಿನ ಸಿನಿಮಾ 'ತಲೈವರ್ 169' (Thalaivar 169) ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ 'ಬೀಸ್ಟ್' ಸಿನಿಮಾವನ್ನ ನಿರ್ದೇಶನ ಮಾಡಿದ್ದ ನೆಲ್ಸನ್ ಅವೇ ಡೈರೆಕ್ಟ್ ಮಾಡ್ತಿದ್ದಾರೆ. 

ಲಹರಿ ಕಾರ್ಯಕ್ರಮದಲ್ಲಿ 'ಜನುಮದ ಜೋಡಿ' ಚಿತ್ರದ ಹಾಡು ಹೇಳಿ ಸಂಭ್ರಮಸಿದ ಶಿವಣ್ಣ

ಈಗಾಗಲೇ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಶಿವರಾಜ್‌ಕುಮಾರ್ ಜೊತೆ ಮಾತು ಕಥೆ ನಡೆದಿದ್ದು, ಶಿವಣ್ಣ ಕೂಡ ಆಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೇನಿದ್ದರು ಕಥೆ ಕೇಳಿ ಅನೌನ್ಸ್ ಮಾಡುವುದಷ್ಟೇ ಭಾಕಿ ಉಳಿದಿದೆ. ರಜನಿಕಾಂತ್ ಅವರಿಗೆ ಡಾ ರಾಜ್ ಕುಟುಂಬದ ಜೊತೆ ಸಾಕಷ್ಟು ವರ್ಷಗಳಿಂದ ಉತ್ತಮ ಒಡನಾಟ ಹೊಂದಿದ್ದಾರೆ. ಅಪ್ಪು ಸಿನಿಮಾ ಹಿಟ್ ಆದಾಗಲೂ ಪುನೀತ್ ರಾಜ್‌ಕುಮಾರ್ ಅವರು ಚಿತ್ರರಂಗದಲ್ಲಿ ಅದ್ಭುತ ಶಕ್ತಿಯಾಗುತ್ತಾರೆ ಎಂದಿದ್ರು ರಜಿನಿ. ಅದಷ್ಟೇ ಅಲ್ಲದೆ ಮನೆಯ ಸಮಾರಂಭಗಳಿಗೆ ರಜನಿ ಹಾಜರಿ ಇದ್ದೆ ಇರುತ್ತೆ. ಹಾಗಾಗಿ ಈಗ ಶಿವಣ್ಣ ಹಾಗೂ ರಜಿನಿ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳೊ ಮನಸ್ಸು ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video